ಕರ್ನಾಟಕ

karnataka

ETV Bharat / bharat

ತಮ್ಮ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿಯಿಂದ ಪಿತೂರಿ: ಗೆಹ್ಲೋಟ್​ ಆರೋಪ

ಸಿಎಂ ಗೆಹ್ಲೋಟ್ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನದಲ್ಲಿ ಸರ್ಕಾರ ಕೆಡವಲು ಸತತ ಪ್ರಯತ್ನ ನಡೆಸಿದೆ. ಆದರೆ ಅದರಲ್ಲಿ ಯಶಸ್ವಿಯಾಗಿಲ್ಲ ಎಂದಿದ್ದಾರೆ. ಅಮಿತ್ ಶಾ ಮತ್ತು (ಬಿಜೆಪಿ ನಾಯಕ) ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾದ ನಂತರ ನಮ್ಮ ಶಾಸಕರು ಅವರ ಮುಖ ನೋಡಲು ನಾಚಿಕೆ ಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೆಹ್ಲೋಟ್​
ಗೆಹ್ಲೋಟ್​

By

Published : Dec 5, 2020, 10:43 PM IST

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್​ ನೇತೃತ್ವದ ರಾಜ್ಯ ಸರ್ಕಾರವನ್ನ ಅಸ್ಥಿರಗೊಳಿಸಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಸಿಎಂ ಗೆಹ್ಲೋಟ್ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಕುರಿತು ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ರಾಜಸ್ಥಾನದಲ್ಲಿ ಸರ್ಕಾರ ಕೆಡವಲು ಸತತ ಪ್ರಯತ್ನ ನಡೆಸಿದೆ. ಆದರೆ ಅದರಲ್ಲಿ ಯಶಸ್ವಿಯಾಗಿಲ್ಲ ಎಂದ ಅವರು, ಅಮಿತ್ ಶಾ ಮತ್ತು (ಬಿಜೆಪಿ ನಾಯಕ) ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾದ ನಂತರ ನಮ್ಮ ಶಾಸಕರು ಅವರ ಮುಖ ನೋಡಲು ನಾಚಿಕೆ ಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ.. ಎಮ್​​ಐಎಮ್​ಗೆ ಬಿಜೆಪಿ ಪೈಪೋಟಿಯೇ ಅಲ್ಲ: ಅಸಾದುದ್ದೀನ್ ಓವೈಸಿ

ಬಿಜೆಪಿಯವರು ಇದುವರೆಗೂ ಐದು ಸರ್ಕಾಗಳನ್ನ ಬೀಳುವಂತೆ ಮಾಡಿದ್ದಾರೆ. ನಮ್ಮದು ಆರನೇ ಸರ್ಕಾರವಾಗಿತ್ತು. ಹೀಗಂತ ನಮ್ಮ ಶಾಸಕರಿಗೆ ಭರವಸೆಯನ್ನೂ ನೀಡಿದ್ದರು. ಹೀಗೆ ನಾನಾ ಕಸರತ್ತುಗಳನ್ನು ನಡೆಸಿ, ಸರ್ಕಾರಗಳನ್ನ ಉರುಳಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ ಎಂದು, ತಮ್ಮ ಪಕ್ಷದ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಗೆಹ್ಲೋಟ್​ ಹೇಳಿದ್ದಾರೆ.

ABOUT THE AUTHOR

...view details