ರಾಯಪುರ(ಛತ್ತೀಸ್‌ಗಢ):ಪ್ರಮಾಣ ವಚನ ಸಮಾರಂಭದಲ್ಲಿ ಗಂಗಾಜಲವನ್ನು ಕೈಯಲ್ಲಿ ಹಿಡಿದುಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಹಲವಾರು ಭರವಸೆಗಳನ್ನು ನೀಡಿದೆ. ಅವುಗಳನ್ನು ಈಡೇರಿಸದೇ, ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರ ಕಾಂಗ್ರೆಸ್‌ನ ಮೂಲ ಸಿದ್ಧಾಂತವಾಗಿದೆ. ಅದಿಲ್ಲದೇ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ ಉಸಿರಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಆರೋಪ ಮಾಡಿದ್ದರು.
ಮದ್ಯಪಾನ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಸುಳ್ಳು ಪ್ರಮಾಣ ಮಾಡಿದ್ದರು. 10 ದಿನಗಳಲ್ಲಿ ಮದ್ಯ ನಿಷೇಧದ ಭರವಸೆ ನೀಡಿ, ಮಹಿಳೆಯರಿಗೆ ದ್ರೋಹ ಮಾಡಿತು. ಆದರೆ ಸಾವಿರ ಕೋಟಿ ರೂ ಮದ್ಯದ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರ ಭಾಗಿಯಾಗಿದೆ. ಮದ್ಯದ ಹಗರಣದ ಕಮೀಷನ್ ಕಾಂಗ್ರೆಸ್ ನಾಯಕರ ಖಾತೆಗೆ ಹೋಗಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದರು
ಈ ಆರೋಪಗಳಿಗೆ ಛತ್ತೀಸ್ಘಡ್ ಸಿಎಂ ಭೂಪೇಶ್ ಬಘೇಲ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಸುಳ್ಳುಗಳನ್ನು ಹರಿಯ ಬಿಡುತ್ತಿದ್ದಾರೆ ಎಂದು ಅಪಾದಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರಧಾನಿ ಮೋದಿ ಆರೋಪಿಸಿರುವ ಎಲ್ಲ ಹೇಳಿಕೆಗಳನ್ನು ಸಿಎಂ ಬಘೇಲ್ ನಿರಾಕರಿಸಿದ್ದಾರೆ. ಪ್ರಧಾನಿ ಮೋದಿಯವರ ಆರೋಪದ ಮೇಲೆ, ಸಿಎಂ ಬಘೇಲ್ ಟ್ವೀಟ್ ಮಾಡುವ ಮೂಲಕ ತಮ್ಮ ಪ್ರತ್ಯುತ್ತರ ನೀಡಿದರು.
’’ಮೋದಿ ಜೀ, ನೀವು ಬಂದ ಕೂಡಲೇ ಛತ್ತೀಸ್‌ಗಢದಲ್ಲಿ ಸುಳ್ಳಿನ ಅಲೆಗಳು ಹರಿಯ ತೊಡಗಿದವು. ಕೇಂದ್ರದ ಹಣದಲ್ಲಿ ಭತ್ತ ಖರೀದಿ ಮಾಡಲಾಗಿದೆ ಎಂದು ರಾಜ್ಯದ ಬಿಜೆಪಿ ನಾಯಕರು ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನೀವು ಪ್ರಧಾನಿಯಾಗಿದ್ದೀರಿ, ನಿಮಗೆ ಸತ್ಯ ತಿಳಿದಿದೆ. ಆದರೆ ನೀವು ಸಹ ಸುಳ್ಳು ಹೇಳಿದ್ದೀರಿ. ರಾಜ್ಯದಲ್ಲಿ ಶೇ.80ರಷ್ಟು ಭತ್ತವನ್ನು ಕೇಂದ್ರವೇ ಖರೀದಿಸಿ, ತೆಗೆದುಕೊಳ್ಳುತ್ತದೆ ಎಂಬುದು ರೈತರ ಹೆಸರಿನಲ್ಲಿ ದೊಡ್ಡ ಸುಳ್ಳು‘‘ ಎಂದು ಸಿಎಂ ಭೂಪೇಶ್ ಬಘೇಲ್ ಟ್ವೀಟ್ ಮಾಡಿದ್ದಾರೆ.
ಗಂಗಾಜಲದ ಸುಳ್ಳು ಹೇಳಿಕೆ ಆರೋಪವನ್ನು ನಿರಾಕರಿಸಿದ ಭೂಪೇಶ್ ಬಘೇಲ್ ತಮ್ಮ ಟ್ವೀಟ್‌ನಲ್ಲಿ ಮತ್ತಷ್ಟು ಬರೆದುಕೊಂಡಿದ್ದಾರೆ. ರಾಜ್ಯಗಳಲ್ಲಿನ ಭತ್ತ ಸಂಗ್ರಹಣೆಯಲ್ಲಿ ನಿಮ್ಮ ಸರ್ಕಾರದ ಪಾತ್ರವು ತುಂಬಾ ದೊಡ್ಡದಾಗಿದ್ದರೆ, ನೀವು ಸ್ಪರ್ಧಿಸಿದ ಲೋಕಸಭಾ ವಾರಾಣಸಿ ಕ್ಷೇತ್ರದ ರೈತರಿಂದ 1,000-1,200 ರೂ.ಗೆ ಭತ್ತ ಪಡೆಯಬಹುದು.