ಜೈಪುರ್(ರಾಜಸ್ಥಾನ): ಕೊರೊನಾ ಮಹಾಮಾರಿ ಆರ್ಭಟ ದೇಶದಲ್ಲಿ ಜೋರಾಗಿದ್ದು, ಇದೀಗ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ರಾಜಸ್ಥಾನ ಸಿಎಂ, ಇಂದು ಸಂಜೆ ಕೋವಿಡ್ ಪರೀಕ್ಷೆಗೊಳಪಟ್ಟಿದ್ದು, ವರದಿ ಪಾಸಿಟಿವ್ ಬಂದಿದೆ. ದೇಹದಲ್ಲಿ ಸೌಮ್ಯ ಪ್ರಮಾಣದ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಪ್ರತ್ಯೇಕಗೊಂಡು, ಕೋವಿಡ್ ಪರೀಕ್ಷೆಗೊಳಪಡುವಂತೆ ವಿನಂತಿ ಮಾಡಿದ್ದಾರೆ.