ಜೈಪುರ (ರಾಜಸ್ಥಾನ): ರಾಜಸ್ಥಾನದಲ್ಲಿ 19 ಹೊಸ ಜಿಲ್ಲೆಗಳು ಮತ್ತು ಮೂರು ಹೊಸ ವಿಭಾಗಗಳ ರಚನೆ ಬಗ್ಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಹೊಸ 19 ಜಿಲ್ಲೆಗಳ ಮೂಲಕ ಒಟ್ಟು ಜಿಲ್ಲೆಗಳ ಸಂಖ್ಯೆ 50ಕ್ಕೆ ಏರಿಕೆಯಾದರೆ, ಒಟ್ಟಾರೆ 10 ವಿಭಾಗಗಳನ್ನು ರಾಜಸ್ಥಾನ ಹೊಂದಲಿದೆ.
ಶುಕ್ರವಾರ ರಾಜ್ಯ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಘೋಷಣೆ ಮಾಡಿದ್ದಾರೆ. ಉನ್ನತ ಮಟ್ಟದ ಸಮಿತಿಯು ಪ್ರಸ್ತಾವನೆಗಳನ್ನು ಪರಿಶೀಲಿಸಲಾಗಿದೆ. ಇದರ ಅಂತಿಮ ವರದಿಯನ್ನು ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಲಾಗಿತ್ತು. ಇದರ ನಂತರ ಈ ಹೊಸ ಜಿಲ್ಲೆಗಳು ಮತ್ತು ವಿಭಾಗಗಳ ರಚನೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಗೆಹ್ಲೋಟ್ ತಿಳಿಸಿದರು.
ಪ್ರಮುಖವಾಗಿ ರಾಜಸ್ಥಾನವು ದೇಶದ ಅತಿದೊಡ್ಡ ರಾಜ್ಯವಾಗಿದೆ. ಬಹುತೇಕ ಜಿಲ್ಲೆ ಕೇಂದ್ರಗಳ ದೂರವು 100 ಕಿ.ಮೀಗಳಿಗಿಂತ ಹೆಚ್ಚು ಇದೆ. ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿದೆ. ಹಲವು ಜಿಲ್ಲೆಗಳ ಜನಸಂಖ್ಯೆಯೂ ಅಧಿಕವಾಗಿದೆ. ತುಲನಾತ್ಮಕವಾಗಿ ಚಿಕ್ಕ ಜಿಲ್ಲೆಯಾಗಿರುವುದರಿಂದ ಆಡಳಿತದ ಮೇಲ್ವಿಚಾರಣೆ, ಆಡಳಿತ ನಿರ್ವಹಣೆಯ ಮೇಲಿನ ನಿಯಂತ್ರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಸುಲಭವಾಗಲಿದೆ ಎಂದು ಹೇಳಿದರು.
ಹೊಸ ವಿಭಾಗಗಳು ಮತ್ತು ಜಿಲ್ಲೆಗಳು:ಸಿಎಂ ಸಿಎಂ ಗೆಹ್ಲೋಟ್ ಅವರುಬನ್ಸ್ವಾರಾ, ಪಾಲಿ ಮತ್ತು ಸಿಕರ್ ಹೊಸ ವಿಭಾಗಗಳನ್ನು ರಚಿಸಲಾಗಿದೆ ಎಂದು ಹೇಳಿದರು. ಜೈಪುರ ಜಿಲ್ಲೆಯನ್ನು ಜೈಪುರ ಉತ್ತರ, ಜೈಪುರ ದಕ್ಷಿಣ, ಡುಡು ಮತ್ತು ಕೊಟ್‌ಪುಟ್ಲಿ ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಸಿಎಂ ಗೆಹ್ಲೋಟ್ ಅವರ ತವರು ಜಿಲ್ಲೆ ಜೋಧ್‌ಪುರವನ್ನು ಜೋಧ್‌ಪುರ ಪೂರ್ವ, ಜೋಧ್‌ಪುರ ಪಶ್ಚಿಮ ಮತ್ತು ಫಲೋಡಿ ಎಂದು ವಿಂಗಡನೆ ಮಾಡಲಾಗಿದೆ.