ಕರ್ನಾಟಕ

karnataka

ETV Bharat / bharat

ಕೆಲಸ ಮಾಡ್ತಿದೆ ಲಾಕ್​ಡೌನ್​​: ದೆಹಲಿಯಲ್ಲಿಂದು 8,500 ಕೋವಿಡ್ ಕೇಸ್​ - ಮುಖ್ಯಮಂತ್ರಿ ಕೇಜ್ರಿವಾಲ್​

ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್​ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದ್ದು, ಇದೇ ವಿಚಾರವಾಗಿ ಕೇಜ್ರಿವಾಲ್ ಮಾಹಿತಿ ಹಂಚಿಕೊಂಡಿದ್ದಾರೆ.

CM Kejriwal
CM Kejriwal

By

Published : May 14, 2021, 3:56 PM IST

ನವದೆಹಲಿ:ದೇಶಾದ್ಯಂತ ಕೋವಿಡ್ ಕೇಸ್​ಗಳ ಸಂಖ್ಯೆಯಲ್ಲಿ ಇದೀಗ ಸ್ವಲ್ಪ ಮಟ್ಟದ ಇಳಿಕೆ ಕಂಡು ಬರುತ್ತಿದ್ದು, ಅದಕ್ಕೆ ಲಾಕ್​ಡೌನ್ ಹೇರಿಕೆ ಮಾಡಿರುವುದೇ ಮುಖ್ಯ ಕಾರಣ ಎಂಬ ಮಾತು ಸಹ ಕೇಳಿ ಬರಲು ಶುರುವಾಗಿದೆ.

ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಪ್ರತಿದಿನ 20 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣ ದಾಖಲಾಗುತ್ತಿದ್ದವು. ಆದರೆ ಲಾಕ್​ಡೌನ್ ನಂತರ ಇದರಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 8,500 ಕೋವಿಡ್ ಪ್ರಕರಣ ಕಾಣಿಸಿಕೊಂಡಿವೆ.

ಇದನ್ನೂ ಓದಿ: ಕೋವಿಡ್​ ಹೋರಾಟದಲ್ಲಿ 'ಹನುಮ ಪಡೆ'..100 ಮಂದಿ ತಂಡ ರಚಿಸಿ ನೆರವು

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಖ್ಯಮಂತ್ರಿ ಕೇಜ್ರಿವಾಲ್​, ದೆಹಲಿಯಲ್ಲಿ ಶೇ. 36ರಿಂದ ಕೋವಿಡ್​ ಪ್ರಕರಣ ಇದೀಗ ಶೇ. 12ಕ್ಕೆ ಇಳಿಕೆಯಾಗಿದ್ದು, ಕಳೆದ 10 ದಿನಗಳಲ್ಲಿ 3,000 ಸಾವಿರ ಬೆಡ್​ ಖಾಲಿಯಾಗಿವೆ ಎಂದಿದ್ದಾರೆ. ಕಠಿಣ ಲಾಕ್​ಡೌನ್ ಜಾರಿಗೊಳಿಸಿರುವುದೇ ಇಳಿಕೆ ಕಂಡು ಬರಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲೂ ಕೊರೊನಾ ಸೋಂಕಿತ ಪ್ರಕರಣ ಕಡಿಮೆಯಾಗಿದ್ದು, ಇದಕ್ಕೆ ಕಠಿಣ ಲಾಕ್​ಡೌನ್​ ಕ್ರಮ ಜಾರಿಗೊಳಿಸಿರುವುದೇ ಮುಖ್ಯ ಕಾರಣ ಎಂಬ ಮಾತು ಸಹ ಕೇಳಿ ಬಂದಿವೆ.

ABOUT THE AUTHOR

...view details