ಕರ್ನಾಟಕ

karnataka

By

Published : Jul 28, 2021, 9:19 PM IST

ETV Bharat / bharat

ಕಾಶ್ಮೀರ: ಅಮರನಾಥ ಗುಹೆಯ ಬಳಿ ಮೇಘ ಸ್ಫೋಟ

ಬಾಲ್ಟಾಲ್ ಗಂಡರ್‌ಬಲ್ ಭಾಗದ ಅಮರನಾಥ ಗುಹೆಯ ಬಳಿಯ ಬೇಸ್ ಕ್ಯಾಂಪ್‌ನಲ್ಲಿ ಮೇಘ ಸ್ಫೋಟಗೊಂಡಿದೆ. ಪರಿಣಾಮ ಅಲ್ಲಿನ ಬೇಸ್‌ಕ್ಯಾಂಪ್‌ಗೆ ಹಾನಿಯಾಗಿದೆ.

cloudburst-near-amarnath-cave-jammu-kashmir
ಅಮರನಾಥ ಗುಹೆಯ ಬಳಿ ಮೇಘ ಸ್ಫೋಟ

ಶ್ರೀನಗರ: ಅಮರನಾಥ ಗುಹೆಯ ಬಳಿಯ ಬೇಸ್ ಕ್ಯಾಂಪ್‌ನಲ್ಲಿ ಮೇಘ ಸ್ಫೋಟಗೊಂಡಿದೆ. ಈ ಹಿನ್ನೆಲೆ ಬೇಸ್‌ಕ್ಯಾಂಪ್‌ ಹಾನಿಯಾಗಿದ್ದು, ಸಾವುನೋವುಗಳು ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಎಸ್‌ಡಿಆರ್‌ಎಫ್‌ನ ಎರಡು ತಂಡಗಳು ಅಮರನಾಥ ಗುಹೆಯಲ್ಲಿವೆ ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿವೆ.

ಅಮರನಾಥ ಗುಹೆಯ ಬಳಿ ಮೇಘ ಸ್ಫೋಟ

ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಅಮರನಾಥ ಯಾತ್ರೆ ಮುಂದೂಡಲ್ಪಟ್ಟಿದೆಯಾದರೂ ಭದ್ರತಾ ಪಡೆ ಸಿಬ್ಬಂದಿ, ಆರೋಗ್ಯ ಇಲಾಖೆ, ಇತರ ಇಲಾಖೆಗಳ ನೌಕರರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಮರನಾಥ ಗುಹೆಯ ಬಳಿ ಮೇಘ ಸ್ಫೋಟ

ಈ ಹಿಂದೆ ಕೇಂದ್ರ ಪ್ರಾಂತ್ಯದ ಲಡಾಖ್‌ನ ಕಾರ್ಗಿಲ್ ಪ್ರದೇಶದ ಎರಡು ಸ್ಥಳಗಳಲ್ಲಿ ಇದೇ ರೀತಿಯ ಘಟನೆಯಿಂದ ಸುಮಾರು ಒಂದು ಡಜನ್ ಮನೆಗಳು ಮತ್ತು ಬೆಳೆಗಳು ಹಾನಿಗೊಳಗಾಗಿದ್ದವು. ಆದರೆ ಈ ಬಾರಿ ಅಂತಹ ಅನಾಹುತಗಳು ಸಂಭವಿಸಿಲ್ಲ ಎನ್ನಲಾಗಿದೆ.

ಅಮರನಾಥ ಗುಹೆಯ ಬಳಿ ಮೇಘ ಸ್ಫೋಟ

ABOUT THE AUTHOR

...view details