ಶ್ರೀನಗರ:ಕುಲ್ಗಾಮ್ ಜಿಲ್ಲೆಯ ಗ್ರಾಮಗಳಲ್ಲಿ ಮೇಘ ಸ್ಫೋಟ ಸಂಭವಿಸಿದೆ. ಆದರೆ, ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಬ್ರಿನಾಲ್ ಲಾಮರ್ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲೇ ಮೇಘ ಸ್ಫೋಟವಾಗಿದ್ದು, ಜನರಲ್ಲಿ ಭೀತಿ ಮೂಡಿದೆ. ಬರ್ನಾಲ್ ಲಾಮರ್ ಗ್ರಾಮದಲ್ಲಿ ಬುಧವಾರ ಮೇಘ ಸ್ಫೋಟವಾಗಿದ್ದು, ಪರ್ವತಗಳಿಂದ ಗ್ರಾಮಕ್ಕೆ ಮಳೆ ನೀರು ನುಗ್ಗಿದೆ ಎಂದು ಸ್ಥಳೀಯರು ತಿಳಿಸಿದರು.
ಶಾಲೆ ಜಾಲಾವೃತ- ಮಕ್ಕಳನ್ನು ಬೇರೆಡೆ ಸ್ಥಳಾಂತರ:ಮೇಘ ಸ್ಫೋಟದ ಹಿನ್ನೆಲೆ ತಕ್ಷಣವೇ ತಂಡವೊಂದು ಸ್ಥಳಕ್ಕೆ ಭೇಟಿ ನೀಡಿದೆ. ಆದರೆ, ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೇ ಶಾಲೆಯ ಆಡಳಿತವು ಈ ಹಿಂದೆ ಶಾಲಾ ಮಕ್ಕಳನ್ನು ಸುರಕ್ಷಿತ ವಹಿಸಿತು. ಶಾಲೆಯ ಆಡಳಿತ ಮಂಡಳಿಯೊಂದಿಗೆ ಮಾತನಾಡಿದ ಅವರು, ''ಮೊದಲು ಮಕ್ಕಳನ್ನು ಶಾಲೆಯಿಂದ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದಿದ್ದೇವೆ. ಇತ್ತ ಶಾಲೆಯ ಅಡುಗೆ ಕೋಣೆ ಜಲಾವೃತವಾಗಿದ್ದು, ಮಕ್ಕಳ ಮಧ್ಯಾಹ್ನದ ಊಟವೂ ನಾಶವಾಗಿಹೊರಗೆ ಬಿದ್ದಿದೆ'' ಎಂದು ತಿಳಿಸಿದರು. ಸ್ಥಳೀಯರ ಪ್ರಕಾರ, ಈ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಇದರಿಂದ ತೋಟಗಳು ಮತ್ತು ಬೆಳೆದ ಬೆಳೆಗಳು ಹಾನಿಗೊಳಗಾಗಿವೆ. ಜೊತೆಗೆ ಆರ್ಥಿಕ ಇಲಾಖೆಯ ತಂಡಗಳು ಪ್ರದೇಶಕ್ಕೆ ಭೇಟಿ ನೀಡಿದ್ದು, ಹಾನಿಯ ಅಂದಾಜು ಮಾಡುತ್ತಿವೆ.
ನಿನ್ನೆಯೂ ಕೋಕರ್ನಾಗ್‌ನಲ್ಲಿ ಮೇಘಸ್ಫೋಟ:ದಕ್ಷಿಣ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಕ್ಷೇತ್ರದಲ್ಲಿ ಮೇಘಸ್ಫೋಟದಿಂದಾಗಿ ಏಷ್ಯಾದ ಅತಿದೊಡ್ಡ ಟ್ರೌಟ್ ಫಾರ್ಮ್‌ನಲ್ಲಿ ಮಂಗಳವಾರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಲ್ಲದೇ ಸಾಕಷ್ಟು ಹಾನಿಯಾಗಿದೆ. ಆದರೆ, ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡು ಉದ್ಯಾನದಲ್ಲಿ ಸಿಲುಕಿದ್ದ ಅನೇಕ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು. ಅವರಿಗೆ ಸ್ಥಳದಲ್ಲಿ ಆಹಾರ ಮತ್ತು ಪಾನೀಯಗಳನ್ನು ಒದಗಿಸಲಾಗಿತ್ತು.