ಕರ್ನಾಟಕ

karnataka

ETV Bharat / bharat

ತೈವಾನ್​ಗೆ ಬೆಂಬಲಿಸಿದರೆ, ಭಾರತದ ಪ್ರತ್ಯೇಕತಾವಾದಿಗಳನ್ನ ಚೀನಾ ಬೆಂಬಲಿಸುತ್ತದೆ: ಗ್ಲೋಬಲ್ ಟೈಮ್ಸ್​ - ಗ್ಲೋಬಲ್ ಟೈಮ್ಸ್ ಹೇಳಿಕೆ

ತೈವಾನ್ ಸ್ವಾತಂತ್ರ್ಯವನ್ನು ಬೆಂಬಲಿಸುವ ಕ್ರಮವನ್ನು ಭಾರತ ಕೈಗೊಂಡರೆ, ಚೀನಾವು ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತದೆ ಎಂದು ಗ್ಲೋಬಲ್ ಟೈಮ್ಸ್​ ಹೇಳಿಕೊಂಡಿದೆ.

India and Taiwan
ಭಾರತ ಮತ್ತು ತೈವಾನ್ ಸಂಬಂಧ

By

Published : Nov 26, 2020, 10:21 PM IST

ನವದೆಹಲಿ: ಭಾರತ, ಅಮೆರಿಕ ಹಾಗೂ ತೈವಾನ್ ರಾಷ್ಟ್ರಗಳ ಸಂಬಂಧ ಸಾಕಷ್ಟು ಸುಧಾರಣೆಯಾಗುತ್ತಿರುವುದಿಂದ ಇಂಡೋ- ಪೆಸಿಫಿಕ್ ವಲಯದಲ್ಲಿ ಚೀನಾ ಆತಂಕಕ್ಕೆ ಒಳಗಾಗಿದ್ದು, ಅಲ್ಲಿನ ಮಾಧ್ಯಮಗಳು ಅತಿರೇಖದ ವರ್ತನೆ ತೋರುತ್ತಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ಲೇಖನವೊಂದರಲ್ಲಿ "ತೈವಾನ್​ನೊಂದಿಗೆ ಚೀನಾದ ಸಂಬಂಧ ವಿಚಾರವನ್ನು ಭಾರತ ಬಳಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ತೈವಾನ್ ಕಾರ್ಡ್ ಅನ್ನು ಭಾರತ ಬಳಸಿಕೊಂಡರೆ, ಚೀನಾ ಪ್ರತ್ಯೇಕವಾದಿಗಳ ಕಾರ್ಡ್​ ಅನ್ನು ಬಳಸಿಕೊಳ್ಳುತ್ತದೆ ಎಂದು ಚೀನಾದ ಮಾಧ್ಯಮ ಹೇಳಿದೆ.

ತೈವಾನ್ ಸ್ವಾತಂತ್ರ್ಯವನ್ನು ಬೆಂಬಲಿಸುವ ಕ್ರಮವನ್ನು ಭಾರತ ಕೈಗೊಂಡರೆ, ಈಶಾನ್ಯ ಭಾರತದ ರಾಜ್ಯಗಳಾದ ತ್ರಿಪುರ, ಮೇಘಾಲಯ, ಮಿಜೋರಾಂ, ಮಣಿಪುರ, ಅಸ್ಸಾಂ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳನ್ನು ಬೆಂಬಲಿಸಲು ಚೀನಾಕ್ಕೆ ಎಲ್ಲಾ ಕಾರಣಗಳಿವೆ ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ತೈವಾನ್​ಗೆ ಶಸ್ತ್ರಾಸ್ತ್ರ ಮಾರಿದ ಅಮೆರಿಕನ್ ಕಂಪನಿಗಳ ಮೇಲೆ ನಿರ್ಬಂಧದ ಅಸ್ತ್ರ ಪ್ರಯೋಗಿಸಿದ ಚೀನಾ!

ಚೀನಾಗೆ ಪ್ರಮುಖ ವಿಶ್ವಶಕ್ತಿಯಾಗಬೇಕೆಂಬ ಭೌಗೋಳಿಕ ರಾಜಕೀಯ ಮಹತ್ವಾಕಾಂಕ್ಷೆವಿದ್ದು, ಅದಕ್ಕೆ ತೈವಾನ್ ಕೇಂದ್ರವಾಗಿದೆ ಎಂದು ಬರ್ಮೀಸ್ ಪತ್ರಿಕೆ ಉಲ್ಲೇಖಿಸಿದ್ದು, ಭಾರತದೊಂದಿಗೆ ತೈವಾನ್ ಸಂಬಂಧ ಸುಧಾರಣೆಯಾಗುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದೆ.

ತೈವಾನ್ ಅನ್ನು ಸಂಪೂರ್ಣವಾಗಿ ತನಗೆ ಸೇರಿಸಿಕೊಳ್ಳುವ ಚೀನಾದ ಕನಸು ನನಸಾದರೆ ಚೀನಾ ಅಲ್ಲಿ ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಲು ತೈವಾನ್ ಅನ್ನು ಬಳಸಿಕೊಳ್ಳುತ್ತದೆ. ಇದರಿಂದಾಗಿ ಚೀನಾದ ನೌಕಾ ಕ್ಷೇತ್ರ ಮತ್ತಷ್ಟು ಪ್ರಾಬಲ್ಯ ಪಡೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.

ಇತ್ತೀಚೆಗಷ್ಟೇ ತೈವಾನ್‌ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದ್ದಕ್ಕಾಗಿ ಬೋಯಿಂಗ್‌ನ ರಕ್ಷಣಾ ಘಟಕ ಮತ್ತು ಲಾಕ್‌ಹೀಡ್ ಮಾರ್ಟಿನ್ ಸೇರಿದಂತೆ ಅಮೆರಿಕದ ಮಿಲಿಟರಿ ಗುತ್ತಿಗೆದಾರರ ಮೇಲೆ ಚೀನಾ ಸರ್ಕಾರ ನಿರ್ಬಂಧ ಹೇರಿತ್ತು.

ABOUT THE AUTHOR

...view details