ಬರೇಲಿ (ಉತ್ತರ ಪ್ರದೇಶ): ನಿನ್ನೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆದಿದ್ದು, "ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವುದು ಸ್ಪಷ್ಟವಾಗಿದೆ" ಎಂದು ಸಮಾಜವಾದಿ ಪಕ್ಷ(ಎಸ್ಪಿ)ದ ಮುಖಂಡ ಅಖಿಲೇಶ್ ಯಾದವ್ ಹೇಳಿಕೆ ನೀಡಿದ್ದಾರೆ.
ಮಾರ್ಚ್ 10 ರಂದು ಬರಬೇಕಿದ್ದ ಫಲಿತಾಂಶ ಮೊದಲ ಹಂತದ ಮತದಾನದಿಂದಲೇ ಬಂದಿದೆ. ಯುಪಿಯಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ. ಹೊಸ ಸರ್ಕಾರ ರಚನೆಯಾದ ನಂತರ ಆರೋಗ್ಯ ಸೇವೆಗಳ ಉತ್ತಮ ಬಜೆಟ್ ಜೊತೆಗೆ ಉಚಿತ ವಿದ್ಯುತ್ ನೀಡುತ್ತೇವೆ. ಬೈಕ್ ಸವಾರರಿಗೆ ಒಂದು ಲೀಟರ್ ಪೆಟ್ರೋಲ್ ಉಚಿತವಾಗಿ ಸಿಗಲಿದೆ. ಐಟಿ ವಲಯದಲ್ಲಿಯೇ 22 ಲಕ್ಷ ಉದ್ಯೋಗಗಳನ್ನು ನೀಡುತ್ತೇವೆ ಎಂದು ಅಖಿಲೇಶ್ ಯಾದವ್ ಭರವಸೆ ನೀಡಿದರು.