ಪಲಾ(ಕೇರಳ): ಖಾಸಗಿ ಬಸ್ವೊಂದರಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಹಾಗೂ ಡ್ರೈವರ್ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಅಫ್ಜಲ್(31) ಹಾಗೂ ಅಬಿನ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಕೇರಳದ ಇಡುಕ್ಕಿಯವರಾಗಿದ್ದಾರೆ. 8ನೇ ತರಗತಿ ವಿದ್ಯಾರ್ಥಿನಿ ಪ್ರತಿದಿನ ಶಾಲೆಗೆ ಇದೇ ಬಸ್ನಲ್ಲಿ ಹೋಗುತ್ತಿದ್ದಳು ಎಂದು ತಿಳಿದು ಬಂದಿದೆ.
ಈಗಾಗಲೇ ಮದುವೆ ಮಾಡಿಕೊಂಡಿರುವ ಅಫ್ಜಲ್ ವಿದ್ಯಾರ್ಥಿನಿ ಜೊತೆ ಪ್ರೀತಿಯ ನಾಟಕವಾಡಿದ್ದಾನೆ. ಶನಿವಾರದಂದು ಶಾಲೆ ಬಿಟ್ಟು ಮನೆಗೆ ತೆರಳಲು ಬಾಲಕಿ ಬಸ್ ಸ್ಯಾಂಡ್ಗೆ ಬಂದಿದ್ದಾಳೆ. ಈ ವೇಳೆ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಈತನ ಕೃತ್ಯಕ್ಕೆ ಕಂಡಕ್ಟರ್ ಅಬಿನ್ ಸಾಥ್ ನೀಡಿದ್ದಾನೆ.
ಇದನ್ನೂ ಓದಿ:ನಾಳೆ ಪಂಜಾಬ್‌ಗೆ ಸಿಎಂ ಅಭ್ಯರ್ಥಿ ಹೆಸರು ಘೋಷಿಸಲಿರುವ ಕೇಜ್ರಿವಾಲ್
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡಿರುವ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಸ್ ಜಪ್ತಿ ಮಾಡಿದ್ದಾರೆ. ಬಾಲಕಿ ನೀಡಿರುವ ಮಾಹಿತಿ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆಕೆಯನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ವರದಿಯಾಗಿದೆ.