ಕೋಯಿಕ್ಕೋಡ್: ಯಾವುದೇ ಪ್ರವೇಶ ದಾಖಲಾತಿ ಪಡೆಯದೇ ಕ್ಲಾಸ್ 12 ವಿದ್ಯಾರ್ಥಿ ನಾಲ್ಕು ದಿನಗಳ ಕಾಲ ಎಂಬಿಬಿಎಸ್ನ ತರಗತಿಗೆ ಹಾಜರಾಗಿದ್ದಾನೆ ಎಂದು ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ನೀಡಿದ ದೂರಿನ ಅನ್ವಯ ಕೇರಳ ಪೊಲೀಸರು ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ನಕಲಿ ದಾಖಲೆ ಅಥವಾ ವಂಚನೆ ಪ್ರಕರಣವಲ್ಲ. ಸರಿಯಾದ ದಾಖಲಾತಿ ಪ್ರವೇಶ ಪಡೆಯದೇ ಯಾರೋ ತರಗತಿಗೆ ಹಾಜರಾಗಿದ್ದಾರೆ ಎಂಬುದರ ಕುರಿತಾಗಿದೆ. ಈ ಕುರಿತು ಎಲ್ಲ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆ ಬಳಿಕ ಈ ಕುರಿತು ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅನೇಕ ವಿದ್ಯಾರ್ಥಿಗಳು ಮೊದಲ ದಿನ ತಡವಾಗಿ ತರಗತಿಗೆ ಬರುತ್ತಾರೆ. ಈ ವೇಳೆ, ಅವರ ಅಡ್ಮಿಶನ್ ಕಾರ್ಡ್ ಪರಿಶೀಲಿಸದೇ ತರಗತಿಗೆ ಅನುಮತಿ ನೀಡುತ್ತೇವೆ. ಅದೇ ರೀತಿ ಯಾರೋ ವಿದ್ಯಾರ್ಥಿ ಸರಿಯಾದ ದಾಖಲಾತಿ ಪಡೆಯದೇ ವಿದ್ಯಾರ್ಥಿ ನಾಲ್ಕು ದಿನ ತರಗತಿಗೆ ಹಾಜರಾಗಿದ್ದಾನೆ. ಐದನೇ ದಿನ ವಿದ್ಯಾರ್ಥಿಗೆ ತರಗತಿಗೆ ಹಾಜರಾಗದ ಬೆನ್ನಲ್ಲೇ ಈ ಕುರಿತು ನಮಗೆ ಅರಿವಿಗೆ ಬಂದಿದೆ ಎಂದು ಕಾಲೇಜಿನ ಉಪ ಪ್ರಾಂಶುಪಾಲರಾದ ಕೆಜಿ ಸಜಿತ್ ಕುಮಾರ್ ತಿಳಿಸಿದ್ದಾರೆ.