ಕರೂರ್(ತಮಿಳುನಾಡು): ಲೈಂಗಿಕ ಶೋಷಣೆ(sexual harassment)ಯಿಂದ ಮನನೊಂದಿದ್ದ 12ನೇ ತರಗತಿ(Class 12 girl suicide) ವಿದ್ಯಾರ್ಥಿನಿವೋರ್ವಳು ಡೆತ್ನೋಟ್ (suicide note,)ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಮಿಳುನಾಡಿನ ಕರೂರ್ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
17 ವರ್ಷದ ವಿದ್ಯಾರ್ಥಿನಿ(17 Year girl Suicide) ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದು, 'ಲೈಂಗಿಕ ಕಿರುಕುಳದಿಂದ ಸಾಯುವ ಕೊನೆ ಹುಡುಗಿ ನಾನೇ ಆಗಿರಬೇಕು' ಎಂದು ಬರೆದಿದ್ದಾಳೆ. ನಾನು ತೆಗೆದುಕೊಳ್ಳುವ ಈ ನಿರ್ಧಾರಕ್ಕೆ ಕಾರಣ ಯಾರು ಎಂದು ಹೇಳಲು ನನಗೆ ಭಯವಾಗುತ್ತದೆ. ಈ ಭೂಮಿಯ ಮೇಲೆ ತುಂಬಾ ವರ್ಷಗಳ ಕಾಲ ನಾನು ಬದುಕಬೇಕು ಎಂಬ ಆಸೆ ಇತ್ತು. ಆದರೆ ಇಷ್ಟು ಬೇಗ ಹೋಗುವ ನಿರ್ಧಾರ ಕೈಗೊಳ್ಳುತ್ತಿದ್ದೇನೆ Sorry ಎಂದು ಬರೆದಿದ್ದಾಳೆ. ಘಟನೆ ನಡೆಯುತ್ತಿದ್ದಂತೆ ಪಕ್ಕದ ಮನೆಯ ಮಹಿಳೆ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ತಿಳಿದು ಬಂದಿದೆ.
ಇದನ್ನೂ ಓದಿರಿ:17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ, ಶಿಕ್ಷಕನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ