ಕರ್ನಾಟಕ

karnataka

ETV Bharat / bharat

ಜುಲೈ 22ರ ಬದಲು ಜು.25ರಂದು CBSE 12ನೇ ತರಗತಿ ಫಲಿತಾಂಶ - ಜುಲೈ 25ರಂದು ಸಿಬಿಎಸ್​ಇ 12ನೇ ತರಗತಿ ಫಲಿತಾಂಶ

ಜುಲೈ 22ರ ಬದಲಿಗೆ ಜುಲೈ 25ರಂದು ಸಿಬಿಎಸ್​ಇ 12ನೇ ತರಗತಿ ಫಲಿತಾಂಶ ಪ್ರಕಟಗೊಳಿಸಲು ನಿರ್ಧರಿಸಲಾಗಿದೆ.

CBSE
CBSE

By

Published : Jul 21, 2021, 6:31 PM IST

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್​ಇ) 12ನೇ ತರಗತಿ ಪರೀಕ್ಷೆಯನ್ನು ಜುಲೈ 22ರಂದು ಪ್ರಕಟಿಸಲಾಗುವುದು ಎಂದು ಈ ಹಿಂದೆ ಹೇಳಿತ್ತು. ಆದರೀಗ ಫಲಿತಾಂಶವನ್ನು ಜುಲೈ 25ರಂದು ಪ್ರಕಟಿಸುವುದಾಗಿ ಆದೇಶ ಹೊರಡಿಸಿದೆ.

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್​ಇ)

ಸಿಬಿಎಸ್​ಇ ಪರೀಕ್ಷಾ ಫಲಿತಾಂಶ ಅಂತಿಮಗೊಳಿಸುವ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಶಾಲೆಗಳ ಜೊತೆಗೆ ಮಂಡಳಿಯು ದತ್ತಾಂಶವನ್ನು ಒಟ್ಟು ಸೇರಿಸಲು ರಾತ್ರಿ ಹಗಲು ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಸಿಬಿಎಸ್‌ಇ ತಿಳಿಸಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆವರೆಗೂ ಸೋನಿಯಾ ಅಧ್ಯಕ್ಷೆ: ಆಜಾದ್​, ಫೈಲಟ್​ಗೆ ಮಹತ್ವದ ಸ್ಥಾನ?

ಫಲಿತಾಂಶ ತಯಾರಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಶಿಕ್ಷಕರು ಒತ್ತಡದಲ್ಲಿದ್ದಾರೆ. ಹೀಗಾಗಿ ಫಲಿತಾಂಶದಲ್ಲಿ ಏರುಪೇರಾಗುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಫಲಿತಾಂಶದಲ್ಲಿ ಯಾವುದೇ ತಪ್ಪುಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೊರೊನಾ ವೈರಸ್ ಕಾರಣ ಬೋರ್ಡ್ ಪರೀಕ್ಷೆ ರದ್ಧುಗೊಳಿಸಲಾಗಿತ್ತು. ಈ ಹಿಂದೆ ವಿದ್ಯಾರ್ಥಿಗಳು ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಲು ಸಿಬಿಎಸ್‌ ಮಂಡಳಿ ಮುಂದಾಗಿದೆ.

ABOUT THE AUTHOR

...view details