ಹೈದರಾಬಾದ್: ತೆಲಂಗಾಣ-ಛತ್ತೀಸ್ಗಡ ಗಡಿಯಲ್ಲಿ ಮಾವೋವಾದಿಗಳು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಪೊಲೀಸರು, ಮೂವರು ನಕ್ಸಲರನ್ನು ಹೊಡೆದುರುಳಿಸಿದ್ದಾರೆ.
ತೆಲಂಗಾಣ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಾವೋವಾದಿಗಳ ಹತ್ಯೆ - ತೆಲಂಗಾಣ-ಛತ್ತೀಸ್ಗಡದ ಗಡಿ
ತೆಲಂಗಾಣ-ಛತ್ತೀಸ್ಗಡ ರಾಜ್ಯಗಳ ಗಡಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮೂವರು ಮಾವೋವಾದಿಗಳನ್ನು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಮೂವರು ಮಾವೋವಾದಿಗಳ ಹತ್ಯೆ
ಮುಳುಗು-ಬಿಜಾಪುರ ಜಿಲ್ಲೆಗಳ ಗಡಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಅಡಗಿರುವ ಮಾವೋವಾದಿಗಳಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೃತ ನಕ್ಸಲರಿಂದ ಎಕೆ-47 ಸೇರಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.