ಕರ್ನಾಟಕ

karnataka

ETV Bharat / bharat

ಪಾದಯಾತ್ರೆ ವೇಳೆ ಟಿಆರ್‌ಎಸ್ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ..ಇಬ್ಬರಿಗೆ ಗಾಯ - ಟಿಆರ್‌ಎಸ್ ಬಿಜೆಪಿ ಕಾರ್ಯಕರ್ತರ ನಡುವೆ

ಬಿಜೆಪಿ ಶಾಂತಿಯುತವಾಗಿ ಪಾದಯಾತ್ರೆ ನಡೆಸುತ್ತಿದ್ದರೂ ಟಿಆರ್‌ಎಸ್‌ ಅಶಾಂತಿ ಸೃಷ್ಟಿಸಿದೆ. ಪೊಲೀಸರು ಟಿಆರ್‌ಎಸ್ ಕಾರ್ಯಕರ್ತರಂತೆ ವರ್ತಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್​ ಕುಮಾರ್​ ಆರೋಪಿಸಿದ್ದಾರೆ.

clashes-between-trs-and-bjp
ಟಿಆರ್‌ಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

By

Published : Aug 16, 2022, 10:24 AM IST

ಹೈದರಾಬಾದ್ : ತೆಲಂಗಾಣದ ಜನಗಾಂವ್ ಜಿಲ್ಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್ ಕುಮಾರ್ ಅವರು ಸೋಮವಾರ ನಡೆಸಿರುವ ಪಾದಯಾತ್ರೆಯ ವೇಳೆ ಆಡಳಿತಾರೂಢ ಟಿಆರ್​ಎಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದು ಇಬ್ಬರು ಗಾಯಗೊಂಡಿದ್ದಾರೆ.

ಜಿಲ್ಲೆಯ ದೇವರುಪ್ಪಲದಲ್ಲಿ ಕಲ್ಲು ತೂರಾಟ ಸೇರಿದಂತೆ ಘರ್ಷಣೆ ಸಂಭವಿಸಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ಬಗ್ಗೆ ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ ತಮ್ಮ 'ಪಾದಯಾತ್ರೆ'ಯನ್ನು ಪುನಾರಂಭಿಸಿದ ಕುಮಾರ್, ಟಿಆರ್‌ಎಸ್ ಗೂಂಡಾಗಳು ಕಲ್ಲು ತೂರಾಟ ನಡೆಸಿ ಇಬ್ಬರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. "ಸ್ವಾತಂತ್ರ್ಯ ದಿನದಂದು ದೇವರಪ್ಪಲದಲ್ಲಿ # ಪ್ರಜಾಸಂಗ್ರಾಮ ಯಾತ್ರೆ 3ರ ಸಂದರ್ಭದಲ್ಲಿ ಟಿಆರ್‌ಎಸ್ ನ ಕೆಲ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರಿಂದ 2 @BJP4Telangana ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇದು TRS ಬೋಧಿಸಿದ ಗಾಂಧಿ ರಾಜಕೀಯವೇ?," ಎಂದು ಅವರು ಟ್ವೀಟ್ ಮಾಡಿದ್ದಾರೆ.

ಟಿಆರ್​ಎಸ್​​ ವಿರುದ್ಧ ಬಿಜೆಪಿ ಗರಂ:ಬಿಜೆಪಿ ಶಾಂತಿಯುತವಾಗಿ ಪಾದಯಾತ್ರೆ ನಡೆಸುತ್ತಿದ್ದರೂ ಟಿಆರ್‌ಎಸ್‌ ಅಶಾಂತಿ ಸೃಷ್ಟಿಸಿದೆ. ಪೊಲೀಸರು ಟಿಆರ್‌ಎಸ್ ಕಾರ್ಯಕರ್ತರಂತೆ ವರ್ತಿಸಿದ್ದಾರೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷರು, ಡಿಜಿಪಿ ಎಂ.ಮಹೇಂದರ್ ರೆಡ್ಡಿ ಅವರೊಂದಿಗೆ ಮಾತನಾಡಿ ಘಟನೆಯ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವಂತೆ ಕೋರಿದರು.

ಇದರ ಮಧ್ಯೆ ಜನಾಂವ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಪಂಚಾಯತ್ ರಾಜ್ ಸಚಿವ ಎರ್ರಬೆಳ್ಳಿ ದಯಾಕರ್ ರಾವ್, ಬಿಜೆಪಿ ಜನರಿಗೆ ಏನು ಮಾಡಿದೆ ಎಂಬುದನ್ನು ಹೇಳಲಿ. ಟಿಆರ್‌ಎಸ್ ಆಡಳಿತದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಸಂಜಯ್‌ಕುಮಾರ್‌ ಅವರು ಕ್ಷೇತ್ರದಲ್ಲಿ ಆಗಿರುವ ಕಲ್ಯಾಣ ಮತ್ತು ಅಭಿವೃದ್ಧಿಯನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದರು.

ಕುಮಾರ್ ತಮ್ಮ 'ಪಾದಯಾತ್ರೆ'ಯ ಮೂರನೇ ಹಂತವನ್ನು ಆಗಸ್ಟ್ 2 ರಂದು ದೇವಾಲಯದ ಪಟ್ಟಣ ಯಾದಾದ್ರಿಯಿಂದ ಪ್ರಾರಂಭಿಸಿದ್ದರು.

ಇದನ್ನು ಓದಿ:ವಾಹನ ಚಾರ್ಜಿಂಗ್​ ವೇಳೆ ಸ್ಫೋಟ.. ಎರಡು ಎಲೆಕ್ಟ್ರಿಕ್​ ಬೈಕ್​ಗಳು ಸುಟ್ಟು ಭಸ್ಮ

ABOUT THE AUTHOR

...view details