ಬರಾಕ್ಪೋರ್(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ವಿಧಾನಸಭೆಯ ಕೆಲವೊಂದು ಸ್ಥಾನಗಳಿಗೆ ಇಂದು 6ನೇ ಹಂತದ ಮತದಾನ ನಡೆಯುತ್ತಿದ್ದು, ಇದರ ಮಧ್ಯೆ ಟಿಎಂಸಿ - ಬಿಜೆಪಿ ಕಾರ್ಯಕರ್ತರು ಮತ್ತೊಮ್ಮೆ ಕೈ-ಕೈ ಮಿಲಾಯಿಸಿದ್ದಾರೆ.
ಪಶ್ಚಿಮ ಬಂಗಾಳದ ಬರಾಕ್ಪೋರ್ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಶಂಖಾರಿಪರಾ ಪ್ರದೇಶದಲ್ಲಿ ಪುರಸಭೆ ಆಡಳಿತಾಧಿಕಾರಿ ಉತ್ತಮದಾಸ್ ತಮ್ಮ ಸಹಚರರೊಂದಿಗೆ ಮತದಾ ಕೇಂದ್ರದತ್ತ ತೆರಳುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಜೈ ಶ್ರೀ ರಾಮ್ ಘೋಷಣೆ ಕೂಗಿದ್ದಾರೆ. ಮತದಾನ ಮಾಡಿ ವಾಪಸ್ ಬರುವ ವೇಳೆ ಟಿಎಂಸಿ - ಬಿಜೆಪಿ ಕಾರ್ಯಕರ್ತರು ಘರ್ಷಣೆ ನಡೆದಿದೆ. ಘಟನೆಯಿಂದ ಎರಡು ಪಕ್ಷದ ನಾಲ್ವರು ಗಾಯಗೊಂಡಿದ್ದಾರೆ.