ವಿಜಯನಗರ:ಲವ್ ವಿವಾದ ಹಿನ್ನೆಲೆ ಇಬ್ಬರು ಡಿಗ್ರಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯಲ್ಲಿ ವಿದ್ಯಾರ್ಥಿವೋರ್ವ ಚಾಕುವಿನ ದಾಳಿಗೊಳಾಗಿರುವ ಘಟನೆ ಗಜಪತಿನಗರದಲ್ಲಿ ನಡೆದಿದೆ.
ನಾಲ್ಕು ದಿನಗಳಿಂದ ಕರ್ರಿ ಚೇತನ್ ಮತ್ತು ಸಿಂಹಾದ್ರಿ ಮುರುಳಿ ಮಧ್ಯೆ ಲವ್ ವಿವಾದ ನಡೆದಿತ್ತು ಎನ್ನಲಾಗ್ತಿದೆ. ಈ ವಿಷಯ ಮುರಳಿಗೆ ತಲೆಗೆಡಿಸಿತ್ತು. ಹೀಗಾಗಿ ಚೇತನ್ ಮೇಲೆ ಹಲ್ಲೆ ನಡೆಸಲು ಸಜ್ಜಾಗಿದ್ದ.
ಗಜಪತಿನಗರದಲ್ಲಿರುವ ಕಾಲೇಜ್ ಸಮಯ ಮುಗಿಸಿಕೊಂಡು ಮನೆಗೆ ತೆರಳಲು ಚೇತನ್ ಬಸ್ ಹತ್ತಿದ್ದಾನೆ. ಮುರಳಿ ಮುಂದಿನ ನಿಲ್ದಾಣ ಅಂದ್ರೆ ಕೊತ್ತರೋಡ್ಡು ಬಳಿ ಬಸ್ ಹತ್ತಿದ್ದಾನೆ. ಮತ್ತೆ ಇಬ್ಬರ ಮಧ್ಯೆ ಬಸ್ನಲ್ಲಿ ಜಗಳವಾಗಿದೆ. ಈ ವೇಳೆ ಮುರಳಿ ತಾನೂ ತಂದಿದ್ದ ಚಾಕುವಿನಿಂದ ಚೇತನ್ಗೆ ಚುಚ್ಚಿ ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಚೇತನನ್ನು ಬಸ್ ಪ್ರಯಾಣಿಕರು ಮತ್ತು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಚೇತನ್ ಪಾರಾಗಿದ್ದಾನೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಬಳಿಕವೇ ಅಸಲಿ ವಿಷಯ ಹೊರ ಬೀಳಲಿದೆ.