ಲೂಧಿಯಾನ (ಪಂಜಾಬ್): ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕಾರಾಗೃಹದ ಸಹಾಯಕ ಅಧೀಕ್ಷಕ ಸೂರಜ್ ಮಾಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೈದಿಗಳಾದ ದೀಪಕ್, ಅನಿಕೇತ್, ಶಿವ ಭಟ್ಟಿ, ಅಂಕುಶ್ ಕುಮಾರ್, ರೋಹಿತ್, ದರ್ಪಣ್ ಸಿಂಗ್ಲಾ ನಡುವೆ ಜಗಳವಾಗಿದೆ. ಘರ್ಷಣೆಯಲ್ಲಿ ದೀಪಕ್, ದರ್ಪಣ್ ಮತ್ತು ರೋಹಿತ್ ಗಾಯಗೊಂಡಿದ್ದಾರೆ. ಜೈಲಿನಿಂದ 9 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಲೂಧಿಯಾನದ ಕಾರಾಗೃಹದಲ್ಲಿ ಕೈದಿಗಳ ಹೊಡೆದಾಟ: ಮೂವರಿಗೆ ಗಾಯ - nine mobile phones recovered
ಲೂಧಿಯಾನ ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಜಗಳ ನಡೆದಿದೆ.
ಲೂಧಿಯಾನ ಜಿಲ್ಲೆಯ ಕೇಂದ್ರ ಕಾರಾಗೃಹ
ಇದನ್ನೂ ಓದಿ:ಪಂಜಾಬ್: ದಟ್ಟ ಮಂಜಿನಿಂದ ಸರಣಿ ಅಪಘಾತ, ಹಲವು ಮೇಕೆಗಳು ಸಾವು
ಗಾಯಾಳುಗಳಲ್ಲಿ ಇಬ್ಬರನ್ನು ಲೂಧಿಯಾನದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಜೈಲಿನಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಮೂವರ ತಲೆಗೆ ಗಾಯವಾಗಿದ್ದು, ಹೊಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.