ನವದೆಹಲಿ: ಕಳೆದ ಒಂದು ವಾರದಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಕೋವಿಡ್ ರಾಷ್ಟ್ರೀಯ ಕಾರ್ಯಪಡೆ ಹೇಳಿದೆ.
ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ಲಾಕ್ಡೌನ್ಗೆ ಟಾಸ್ಕ್ ಫೋರ್ಸ್ ಶಿಫಾರಸು - ನೀತಿ ಆಯೋಗ
ಕಳೆದ ಒಂದು ವಾರದಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ಪಾಸಿಟಿವ್ ಕೇಸ್ಗಳು ವರದಿಯಾಗಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಕೋವಿಡ್ -19 ಟಾಸ್ಕ್ ಫೋರ್ಸ್ ಬುಧವಾರ ಶಿಫಾರಸು ಮಾಡಿದೆ.
ಕೋವಿಡ್ -19 ಸೋಂಕಿನ ಶೀಘ್ರ ಹರಡುವಿಕೆಯನ್ನು ನಿಯಂತ್ರಿಸಲು ಈ ಹೆಜ್ಜೆ ಅಗತ್ಯವಾಗಿದೆ ಎಂದು ತಿಳಿಸಿದೆ. ನೀತಿ ಆಯೋಗದ ಡಾ.ವಿ.ಕೆ. ಪಾಲ್ ಅವರ ನೇತೃತ್ವದ ಕಾರ್ಯಪಡೆ ರಾಜ್ಯ ಸರ್ಕಾರಗಳು ಜನರಿಗೆ ಎರಡನೇ ಡೋಸ್ ನೀಡುವ ಬಗ್ಗೆ ಒತ್ತು ನೀಡಬೇಕಾಗಿದೆ ಎಂದು ಹೇಳಿದೆ. ಮೊದಲ ಡೋಸ್‌ನೊಂದಿಗೆ ಲಸಿಕೆ ಹಾಕಿದ ಒಟ್ಟು 13.55 ಕೋಟಿ ಜನರಲ್ಲಿ, ಕೇವಲ 3.72 ಕೋಟಿ ಜನರಿಗೆ ಮಾತ್ರ ಎರಡನೇ ಡೋಸ್ ಮೂಲಕ ಲಸಿಕೆ ನೀಡಲಾಗಿದೆ ಎಂದು ಸರ್ಕಾರದ ವರದಿಗಳು ತಿಳಿಸಿವೆ.
ಇನ್ನು ವ್ಯಾಕ್ಸಿನೇಷನ್ ಡ್ರೈವ್ ಜೊತೆಗೆ, ಕಟ್ಟುನಿಟ್ಟಾದ ಲಾಕ್‌ಡೌನ್ ಕ್ರಮಗಳು ಸಾಂಕ್ರಾಮಿಕ ರೋಗದ ಪ್ರಸ್ತುತ ತೀವ್ರತೆಯನ್ನು ಕಡಿಮೆ ಮಾಡುವ ಎರಡು ಅಂಶಗಳಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಇದೇ ವೇಳೆ ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡುವ ಕುರಿತು ಕಾರ್ಯಪಡೆ ಚರ್ಚಿಸಿತು. ಇನ್ನು ಹೆಚ್ಚಿನ ಕೊರೊನಾ ಪ್ರಕರಣಗಳು ಕಂಡುಬರುವ ಜಿಲ್ಲೆಗಳಲ್ಲಿ ಕಠಿಣ ಲಾಕ್‌ಡೌನ್ ಹೇರಬೇಕು ಮತ್ತು ಶೇಕಡಾ 10 ರಿಂದ 5 ಕ್ಕೆ ಸೋಂಕಿತರ ಸಂಖ್ಯೆ ಇಳಿಮುಖವಾದರೆ ಲಾಕ್‌ಡೌನ್ ಅನ್ನು ಹಿಂಪಡೆಯಬೇಕು ಎಂದು ಟಾಸ್ಕ್ ಫೋರ್ಸ್ ತಿಳಿಸಿದೆ.