ನವದೆಹಲಿ:ಕೋವಿಡ್ -19 ಮಾದರಿ ಪರೀಕ್ಷಿಸಲು ರೋಗಿಯು ಲವಣಯುಕ್ತ ದ್ರಾವಣವನ್ನು ಬಾಯಲ್ಲಿ ಹಾಕಿ ಮುಕ್ಕಳಿಸುವ (ಗಾರ್ಗಲ್) ಆರ್ಟಿ-ಪಿಸಿಆರ್ ವಿಧಾನ ಅಭಿವೃದ್ಧಿಪಡಿಸುವುದಾಗಿ ನಾಗ್ಪುರ ಮೂಲದ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ಹೇಳಿ ಕೆಲ ದಿನಗಳ ನಂತರ, ಭಾರತದ ಪ್ರತಿಷ್ಠಿತ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ (ಏಮ್ಸ್) ಸಂಶೋಧಕರು ಮತ್ತು ವೈದ್ಯರು ಒಂದು ವರ್ಷದ ಹಿಂದೆ ಇದೇ ರೀತಿಯ ಗಾರ್ಗ್ಲ್ ಲ್ಯಾವೆಜ್ ತಂತ್ರವನ್ನು ಪ್ರಸ್ತಾಪಿಸಿ ಮತ್ತು ಅಭಿವೃದ್ಧಿಪಡಿಸಿ ಬಳಕೆಗೆ ಪ್ರಸ್ತಾಪಿಸಿದ್ದರು. ಆದರೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಯಾವುದೇ ಸ್ವೀಕೃತಿ ಬರಲಿಲ್ಲ ಎಂದಿದೆ.
ಏಮ್ಸ್ ವೈದ್ಯರು ವರ್ಷದ ಹಿಂದೆ ಗಾರ್ಗಲ್ ಲ್ಯಾವೆಜ್ ತಂತ್ರ ಪ್ರಸ್ತಾಪಿಸಿದರು ಮತ್ತು ಅಭಿವೃದ್ಧಿಪಡಿಸಿದರು. ಆದರೆ ಡಾ. ಹರ್ಷವರ್ಧನ್ ಮತ್ತು ಐಸಿಎಂಆರ್ ಅವರಿಂದ ಯಾವುದೇ ಸ್ವೀಕೃತಿ ಇರಲಿಲ್ಲ. ಸರಿಯಾದ ವಿವರಣೆ ನೀಡದೇ ನೀರಿ ಪ್ರಸ್ತುತಪಡಿಸುತ್ತಿರುವುದು ತಪ್ಪು. ಏಮ್ಸ್ ಯುವ ವೈದ್ಯರಿಗೆ ತಂತ್ರದ ಮನ್ನಣೆ ನೀಡಬೇಕು ಎಂದು ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಆರ್ಡಿಎ-ಏಮ್ಸ್) ಅಧ್ಯಕ್ಷ ಡಾ.ಅಮಂದೀಪ್ ಸಿಂಗ್ ಹೇಳಿದ್ದಾರೆ.
ಕೋವಿಡ್ ಸೋಂಕು ಪರೀಕ್ಷೆಗೆ ಅಗ್ಗದ ವಿಧಾನವೊಂದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದನೆ ನೀಡಿದೆ. ಲವಣಯುಕ್ತ ಬಾಯಿಮುಕ್ಕಳಿಸುವಿಕೆ ಆರ್ಟಿ-ಪಿಸಿಆರ್ ವಿಧಾನ ಇದಾಗಿದ್ದು, ಮೂರು ಗಂಟೆಗಳಲ್ಲಿಯೇ ಫಲಿತಾಂಶ ಸಿಗಲಿದೆ.