ನವದೆಹಲಿ :ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಸಂಸತ್ತಿನ ಕಾರ್ಯ ನಿರ್ವಹಣೆಯನ್ನು ಇಂದು ಪ್ರಬಲವಾಗಿ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಸಂಸತ್ತಿನ ಮುಂಗಾರು ಅಧಿವೇಶನವು ನಿಗದಿತ ಸಮಯಕ್ಕಿಂತ ಎರಡು ದಿನಗಳ ಮೊದಲು ಕೊನೆಗೊಂಡಿರುವುದಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಗುಣಮಟ್ಟದ ಚರ್ಚೆಗಳ ಅನುಪಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಸಿಜೆಐ ಸಂಸತ್ತಿನಲ್ಲಿನ ಚರ್ಚೆಯ ಕೊರತೆಯನ್ನು "ವಿಷಾದದ ಸ್ಥಿತಿ" ಎಂದು ಕರೆದಿದ್ದಾರೆ. ಸದನದಲ್ಲಿ "ಸರಿಯಾದ ಚರ್ಚೆ ನಡೆಯಲಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕಾನೂನಿನ ಸ್ಪಷ್ಟತೆ ಇಲ್ಲ. ಕಾನೂನಿನ ಉದ್ದೇಶವೇನೆಂದು ನಮಗೆ ತಿಳಿದಿಲ್ಲ. ಇದು ಸಾರ್ವಜನಿಕರಿಗೆ ನಷ್ಟವಾಗಿದೆ" ಎಂದು ಅವರು ಹೇಳಿದರು.
"ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಿದರೆ, ಅವರಲ್ಲಿ ಹಲವರು ಕಾನೂನು ಬದ್ಧತೆಯಲ್ಲಿದ್ದರು. ಲೋಕಸಭೆ ಮತ್ತು ರಾಜ್ಯಸಭೆಯ ಮೊದಲ ಸದಸ್ಯರು ವಕೀಲರ ಸಮುದಾಯದಿಂದ ತುಂಬಿದ್ದರು" ಎಂದು ಮುಖ್ಯನ್ಯಾಯಮೂರ್ತಿ ರಮಣ ಹೇಳಿದ್ದಾರೆ.