ಕರ್ನಾಟಕ

karnataka

ETV Bharat / bharat

ಲಲಿತ್​ ಮುಂದಿನ ಸುಪ್ರೀಂ ಸಿಜೆಐ.. ಉತ್ತರಾಧಿಕಾರಿ ಹೆಸರು ಸೂಚಿಸಿದ ನ್ಯಾ.ರಮಣ

ಸುಪ್ರೀಂಕೋರ್ಟ್​ ಸಿಜೆಐ ಎನ್​.ವಿ. ರಮಣ ಅವರು ತಮ್ಮ ಉತ್ತರಾಧಿಯನ್ನಾಗಿ ಯು.ಯು. ಲಲಿತ್​ ಅವರನ್ನು ಕಾನೂನು ಸಚಿವಾಲಯಕ್ಕೆ ಇಂದು ಶಿಫಾರಸು ಮಾಡಿದರು.

cji-nv-ramana-recommends
ಲಲಿತ್​ ಮುಂದಿನ ಸುಪ್ರೀಂ ಸಿಜೆಐ

By

Published : Aug 4, 2022, 12:24 PM IST

ನವದೆಹಲಿ:ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ ರಮಣ ಅವರ ಸೇವಾವಧಿ ಇದೇ ತಿಂಗಳು ಕೊನೆಯಾಗಲಿದ್ದು, ಮುಂದಿನ ಸಿಜೆಐ ಆಗಲು ಹಿರಿಯ ನ್ಯಾಯಮೂರ್ತಿಗಳಾದ ಯು.ಯು. ಲಲಿತ್​ ಅವರ ಹೆಸರನ್ನು ಶಿಫಾರಸು ಮಾಡಿದರು.

ತಮ್ಮ ಉತ್ತರಾಧಿಯನ್ನು ಶಿಫಾರಸು ಮಾಡುವಂತೆ ಕಾನೂನು ಸಚಿವಾಲಯ ಕೋರಿದ ಹಿನ್ನೆಲೆಯಲ್ಲಿ ಇಂದು ರಮಣ ಅವರು, ಲಲಿತ್​ ಮುಂದಿನ ಸುಪ್ರೀಂ ಸಿಜೆಐ ಮಾಡಬಹುದು ಎಂದು ಹೆಸರು ಸೂಚಿಸಿದರು. ಯು.ಯು. ಲಲಿತ್​ ಸುಪ್ರೀಂಕೋರ್ಟ್​ನ 49ನೇ ಸಿಜೆಐ ಆಗಿ ನೇಮಕವಾಗಲಿದ್ದಾರೆ.

ಲಲಿತ್​ ಅವರು ನಿವೃತ್ತ ಹೊಂದಲು ಇನ್ನು ಮೂರು ತಿಂಗಳು ಮಾತ್ರ ಬಾಕಿ ಉಳಿದಿದೆ. ಕಡಿಮೆ ಅವಧಿಗೆ ಅವರು ಸುಪ್ರೀಂ ಸಿಜೆಐ ಆಗಿ ಕೆಲಸ ಮಾಡಲಿದ್ದಾರೆ. ಈಗಿರುವ ಸಿಜೆಐ ರಮಣ ಅವರ ಸೇವಾವಧಿ ಇದೇ ತಿಂಗಳ 26 ರಂದು ಕೊನೆಗೊಳ್ಳಲಿದೆ.

ಓದಿ:ಕೆಐಐಎಫ್​ಬಿ ಹಣಕಾಸು ಅವ್ಯವಹಾರ: ಮಾಜಿ ಹಣಕಾಸು ಸಚಿವರಿಗೆ ಮತ್ತೆ ಇಡಿ ನೋಟಿಸ್

ABOUT THE AUTHOR

...view details