ತಿರುಪತಿ: ಭಾರತದ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಪತ್ನಿಸಮೇತರಾಗಿ ತಿರುಮಲದಲ್ಲಿರುವ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು ಎಂದು ದೇವಾಲಯದ ಅಧಿಕಾರಿ ತಿಳಿಸಿದರು.
ನ್ಯಾ.ರಮಣ ಅವರು ವೆಂಕಟೇಶ್ವರ ಭಕ್ತರಾಗಿದ್ದು, ಆಂಧ್ರದ ಕೃಷ್ಣ ಜಿಲ್ಲೆಯ ಕೃಷಿ ಕುಟುಂಬದಲ್ಲಿ ಜನಿಸಿದವರು.
ಇದನ್ನೂ ಓದಿ:ಮುಂದಿನ ಸಿಜೆಐ ಆಗಿ ನ್ಯಾ.ಎನ್.ವಿ.ರಮಣ ನೇಮಕಕ್ಕೆ ಮುಖ್ಯನ್ಯಾಯಮೂರ್ತಿ ಬೊಬ್ಡೆ ಶಿಫಾರಸು
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ರಮಣ ಇವರನ್ನು ಇತ್ತೀಚೆಗೆ 48 ನೇ ಸಿಜೆಐ ಆಗಿ ನೇಮಕ ಮಾಡಿದ್ದಾರೆ. ಏಪ್ರಿಲ್ 24 ರಂದು ಅವರು ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.