ಕರ್ನಾಟಕ

karnataka

By

Published : Nov 18, 2020, 5:58 PM IST

ETV Bharat / bharat

ಎಸ್ ಎ ಬೊಬ್ಡೆ ಅವರು ಸುಪ್ರೀಂಕೋರ್ಟ್​ ಸಿಜೆಐಯಾಗಿ ಇಂದಿಗೆ ಒಂದು ವರ್ಷ

ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹಿಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಉತ್ತರಾಧಿಕಾರಿಯಾಗಿ ನ.18, 2019 ರಂದು ನೇಮಕಗೊಂಡರು. ಎಸ್.ಎ.ಬೋಬ್ಡೆ ಅವರು ಹಲವಾರು ಪ್ರಮುಖ ತೀರ್ಪುಗಳನ್ನು ನೀಡಿರುವ ಕೀರ್ತಿಗೆ ಪಾತ್ರರಾಗಿದ್ದಾರೆ..

ಎಸ್ ಎ ಬೊಬ್ಡೆ
ಎಸ್ ಎ ಬೊಬ್ಡೆ

ನವದೆಹಲಿ : ಭಾರತದ ಮುಖ್ಯನ್ಯಾಯಮೂರ್ತಿಯಾಗಿ ಜಸ್ಟೀಸ್ ಬೊಬ್ಡೆ ಅವರು ಅಧಿಕಾರ ಸ್ವೀಕರಿ ಇಂದಿಗೆ ಒಂದು ವರ್ಷವಾಗಿದೆ.

ಜಸ್ಟೀಸ್ ರಂಜನ್ ಗೊಗೊಯ್ ಅವರು ಜಸ್ಟೀಸ್ ಬೊಬ್ಡೆ ಅವರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿದ ಬಳಿಕ, ಅವರು ನ.18, 2019 ರಂದು ಭಾರತದ 47ನೇ ಮುಖ್ಯ ನ್ಯಾಯಾಮೂರ್ತಿಯಾಗಿ ಆಯ್ಕೆಯಾದರು. ವಕೀಲ ಕುಟುಂಬ ಹಿನ್ನೆಲೆಯಿಂದ ಬಂದ ಜಸ್ಟೀಸ್ ಬೊಬ್ಡೆ, ಮಹಾರಾಷ್ಟ್ರ ಮೂಲದವರು.

ಇಲ್ಲಿನ ನಾಗ್ಪುರದಲ್ಲಿ 1956ರ ಏಪ್ರಿಲ್ 24ರಂದು ಜನಿಸಿದ ನ್ಯಾ.ಬೊಬ್ಡೆ ನಾಗ್ಪುರ ವಿಶ್ವವಿದ್ಯಾಲಯದಿಂದ ಕಲೆ ಮತ್ತು ಎಲ್ ಎಲ್ ಬಿಯಲ್ಲಿ ಪದವಿ ಪೂರೈಸಿದರು. 1978ರಲ್ಲಿ ಮಹಾರಾಷ್ಟ್ರ ಬಾರ್ ಕೌನ್ಸಿಲ್‌ನ ಅಡ್ವೊಕೇಟ್ ಕೂಡ ಆಗಿದ್ದರು. ಖ್ಯಾತ ಹಿರಿಯ ವಕೀಲ ಅಡ್ವೊಕೇಟ್ ಅರವಿಂದ್ ಶ್ರೀನಿವಾಸ್ ಬೊಬ್ಡೆಯವರ ಮಗ.

ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ 2013ರ ಏಪ್ರಿಲ್ 12ರಂದು ಬಡ್ತಿ ಹೊಂದಿದ್ದರು. ಸೇವಾ ಹಿರಿತನದ ಪ್ರಕಾರ ಜಸ್ಟೀಸ್ ಬೊಬ್ಡೆ ಅವರು ಮುಖ್ಯ ನ್ಯಾಯಮೂರ್ತಿಯಾಗಿದ್ದು, ಪೂರ್ವಾಧಿಕಾರಿ ನ್ಯಾಯಮೂರ್ತಿ ಗೊಗೊಯ್ ಅವರು ಬೊಬ್ಡೆಯವರ ಹೆಸರು ಶಿಫಾರಸು ಮಾಡಿ ಕೇಂದ್ರಕ್ಕೆ ಪತ್ರ ಬರೆದಿದ್ದರು.

ಇವರ ಅವಧಿಯಲ್ಲಿ ಪ್ರಮುಖ ಪ್ರಕರಣಗಳು ಇತ್ಯರ್ಥವಾಗಿವೆ. ಡಿ.2019ರಲ್ಲಿ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿತು. ಇದಕ್ಕೆ ಹಲವಾರು ಪ್ರತಿರೋಧಗಳು ವ್ಯಕ್ತವಾದವು. ಅಧಿಕಾರ ವಹಿಸಿಕೊಂಡ ಕೂಡಲೇ ಅವರು ವಿಚಾರಣೆಗೆ ತೆಗೆದುಕೊಂಡ ಪ್ರಕರಣಗಳಲ್ಲಿ ಇದು ಕೂಡ ಒಂದು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವುದನ್ನು ಪ್ರಶ್ನಿಸುವ ಅರ್ಜಿಗಳು, ಪೌರತ್ವ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕತೆ ಮತ್ತು ಸಿಂಧುತ್ವ ಮುಂತಾದ ಪ್ರಮುಖ ರಾಷ್ಟ್ರೀಯ ಪ್ರಾಮುಖ್ಯತೆಯ ಹಲವಾರು ಪ್ರಕರಣಗಳನ್ನು ನಿರ್ಧರಿಸುವಲ್ಲಿ ಸುಪ್ರೀಂ ಕೋರ್ಟ್ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಸಿಎಎ-ಎನ್‌ಪಿಆರ್-ಎನ್‌ಆರ್‌ಸಿಯನ್ನು ಪ್ರಶ್ನಿಸಿ ರಾಷ್ಟ್ರದಾದ್ಯಂತ ಸುಮಾರು 140ಕ್ಕೂ ಹೆಚ್ಚು ರಿಟ್ ಅರ್ಜಿಗಳನ್ನು ವಿವಿಧ ಪಕ್ಷಗಳು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದವು. ಇದರ ವಿಚಾರಣೆಯಲ್ಲಿ ಕೂಡ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಪ್ರಮುಖ ಪಾತ್ರ ವಹಿಸಿದ್ದಾರೆ.

ಇತ್ತೀಚಿನ ಐತಿಹಾಸಿಕ ಅಯೋಧ್ಯೆಯ ರಾಮಮಂದಿರ ವಿವಾದ ಕುರಿತು ತೀರ್ಪು ನೀಡಿದ ನ್ಯಾಯಪೀಠದಲ್ಲಿ ಅಂದು ನ್ಯಾಯಮೂರ್ತಿಯಾಗಿ ಎಸ್ ಎ ಬೊಬ್ಡೆ ಅವರು ಕೂಡ ಇದ್ದರು.

ಮುಖ್ಯ ನ್ಯಾಯಮೂರ್ತಿಯಾಗಿ ಅವರ ಕ್ರಮಗಳೇನು:

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು ಬದಲಾದಾಗ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರಬಹುದು. ಪ್ರಸ್ತುತ ದೇಶಾದ್ಯಂತ ಕೋರ್ಟ್ ಗಳಲ್ಲಿ ಅನೇಕ ನ್ಯಾಯಾಧೀಶ ಹುದ್ದೆಗಳು ಖಾಲಿಯಿವೆ. ನ್ಯಾಯಾಂಗ ಮೂಲಭೂತಸೌಕರ್ಯದ ಕೊರತೆ ಕೂಡ ಇದೆ. ಇದಕ್ಕೆ ತಾರ್ಕಿಕ ಅಂತ್ಯವನ್ನು ತಮ್ಮ ಪೂರ್ವಾಧಿಕಾರಿಯಿಂದ ಕಂಡುಕೊಳ್ಳಬೇಕೆಂಬುದು ನ್ಯಾಯಮೂರ್ತಿ ಬೊಬ್ಡೆಯವರ ಬಯಕೆಯಾಗಿದೆ.

ಚುನಾವಣಾ ಬಾಂಡ್‌ಗಳು:

ಈ ಕುರಿತ ಅರ್ಜಿಗಳ ಬಗ್ಗೆ ತೀರ್ಪು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ ಕುರಿತು ಹಲವಾರು ಭಾಗಗಳಿಂದ ಟೀಕೆಗಳು ಬರುತ್ತಿವೆ. ಇದು ಅನಾಮಧೇಯ ಚುನಾವಣಾ ಬಾಂಡ್‌ಗಳು ಲೆಕ್ಕವಿಲ್ಲದ ಹಣವನ್ನು ಚಾನೆಲೈಸೇಶನ್ ಮಾಡುವ ಮೂಲಕ ಆಡಳಿತ ಪಕ್ಷಕ್ಕೆ ಭಾರಿ ಅಕ್ರಮ ಪ್ರಯೋಜನಗಳನ್ನು ನೀಡಿವೆ ಎಂದು ಆರೋಪಿಸಿದೆ.

ಅನಾಮಧೇಯ ಚುನಾವಣಾ ಬಾಂಡ್‌ಗಳಿಗೆ ದಾರಿ ಮಾಡಿಕೊಟ್ಟ ಹಣಕಾಸು ಕಾಯ್ದೆ 2017 ರ ನಿಬಂಧನೆಗಳನ್ನು ಪ್ರಶ್ನಿಸಿ 2017 ರಲ್ಲಿ ಅರ್ಜಿಗಳನ್ನು ಸಲ್ಲಿಸಲಾಯಿತು. ಹಣಕಾಸು ಕಾಯ್ದೆ 2017 ರ ಚುನಾವಣಾ ಬಾಂಡ್‌ಗಳಿಗೆ ದಾರಿ ಮಾಡಿಕೊಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, ಕಂಪನಿಗಳ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ಜನರ ಪ್ರಾತಿನಿಧ್ಯ ಕಾಯ್ದೆ, ವಿದೇಶಿ ಕೊಡುಗೆಗಳ ನಿಯಮ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ಪರಿಚಯಿಸಲಾಯಿತು.

ಆದಾಗ್ಯೂ ಈ ಪ್ರಕರಣವು ಮಾರ್ಚ್ 2019 ರ ಹೊತ್ತಿಗೆ ನಡೆಯುತ್ತಿತ್ತು. ಸಿಜೆಐ ಬೊಬ್ಡೆ ಅಧಿಕಾರ ವಹಿಸಿಕೊಂಡ ನಂತರ ಅರ್ಜಿದಾರರು ಪ್ರಕರಣದ ಆರಂಭಿಕ ವಿಚಾರಣೆಗೆ ಅರ್ಜಿಯನ್ನು ಸಲ್ಲಿಸಿದರು.

ಹಿಂದಿನ ಸಿಜೆಐ ಗೊಗೊಯ್ ಅವರಿಗೆ ಲೈಂಗಿಕ ಕಿರುಕುಳ ಕೇಸಿನಲ್ಲಿ ಕ್ಲೀನ್ ಚಿಟ್ ನೀಡಿದ್ದ ಮೂವರು ಸದಸ್ಯರನ್ನೊಳಗೊಂಡ ಸ್ಥಾಯಿ ಸಮಿತಿಯಲ್ಲಿ ಜಸ್ಟೀಸ್ ಬೊಬ್ಡೆ ಕೂಡ ಇದ್ದರು. ಆಧಾರ್ ಕಾರ್ಡು ಹೊಂದಿರದ ನಾಗರಿಕರಿಗೆ ಸರ್ಕಾರಿ ಸೇವೆಗಳು ಮತ್ತು ಮೂಲಭೂತ ಸೇವೆಗಳನ್ನು ನಿರಾಕರಿಸಬಾರದು ಎಂದು 2015ರಲ್ಲಿ ತೀರ್ಪು ನೀಡಿದ್ದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದಲ್ಲಿ ಕೂಡ ಜಸ್ಟೀಸ್ ಬೊಬ್ಡೆಯವರಿದ್ದರು.

ಎಸ್.ಎ.ಬೋಬ್ಡೆ ಅವರು ಹಲವಾರು ಪ್ರಮುಖ ತೀರ್ಪುಗಳನ್ನು ನೀಡಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಅದರಲ್ಲೂ ವಿವಾದಾತ್ಮಕ ಅಯೋಧ್ಯೆಯ ಬಾಬ್ರಿಮಸೀದಿ-ರಾಮ ಜನ್ಮಭೂಮಿ ವಿವಾದ, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯನ್ನು ಮಾಹಿತಿ ಹಕ್ಕು ಕಾಯ್ದೆಗೊಳಪಡಿಸಿದ್ದು ಸೇರಿದಂತೆ ಕೆಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ.

ABOUT THE AUTHOR

...view details