ನವದೆಹಲಿ :ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ನಾಲ್ಕು ಕಾಟ್ರಿಡ್ಜ್‌ಗಳನ್ನು ಹೊಂದಿದ್ದ ವ್ಯಕ್ತಿಯನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಯುನೈಟೆಡ್ ಏರ್ಲೈನ್ಸ್ ಫ್ಲೈಟ್ ನಂಬರ್ (ಯುಎ 868) ನಲ್ಲಿ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣ ಮಾಡಬೇಕಿತ್ತು.
ಬಂಧಿತನ್ನು ಕಪಿಲ್ ವೈಶ್ಯ ಎಂದು ಗುರುತಿಸಲಾಗಿದೆ. ವಿಮಾನ ಪ್ರಯಾಣದಲ್ಲಿ ಮದ್ದು, ಗುಂಡುಗಳನ್ನು ಸಾಗಿಸಲು ಯಾವುದೇ ಅಧಿಕೃತ ದಾಖಲೆಗಳು ಇಲ್ಲದ ಕಾರಣ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅವನಿಂದ ವಶಪಡಿಸಿಕೊಂಡ ನಾಲ್ಕು ಕಾಟ್ರೇಜ್ಗಳನ್ನು ದೆಹಲಿ ಪೊಲೀಸರ ವಶಕ್ಕೆ ನೀಡಲಾಗಿದೆ.