ತಿರುವನಂತಪುರಂ(ಕೇರಳ) :ದೇವರ ನಾಡು ಕೇರಳದಲ್ಲಿ 2ನೇ ಹಂತದ ಕೋವಿಡ್ ಅಬ್ಬರ ಕಡಿಮೆಯಾಗಿಲ್ಲ. ಇದರ ಮಧ್ಯೆ ಕೂಡ ಕೆಲ ಸಡಿಲಿಕೆ ನೀಡಿ ಅಲ್ಲಿನ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಅಕ್ಟೋಬರ್ 25ರಿಂದ ಚಿತ್ರಮಂದಿರ ಹಾಗೂ ಒಳಾಂಗಣ ಕ್ರೀಡಾಂಗಣಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ. ಶೇ.50ರಷ್ಟು ಆಸನದೊಂದಿಗೆ ಸಿನಿಮಾ ಹಾಲ್ ಕಾರ್ಯನಿರ್ವಹಿಸಲಿವೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಕೋವಿಡ್ ಪರಿಶೀಲನಾ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನರಿಗೆ ಮತ್ತಷ್ಟು ಸಡಲಿಕೆ ನೀಡಲಾಗಿದೆ.
ಚಿತ್ರಮಂದಿರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ವೀಕ್ಷಕರು ಕೋವಿಡ್ ಲಸಿಕೆಯ ಎರಡು ಡೋಸ್ ಪಡೆಯುವುದು ಕಡ್ಡಾಯವಾಗಿದೆ. ಶೇ.50ರಷ್ಟು ಆಸನದೊಂದಿಗೆ ಒಪನ್ ಮಾಡಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
ಇದನ್ನೂ ಓದಿರಿ:IPLನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಯಂಗ್ ಪ್ಲೇಯರ್ ಗಾಯಕ್ವಾಡ್
ಉಳಿದಂತೆ ಅಕ್ಟೋಬರ್ 18ರಿಂದ ಕಾಲೇಜ್ಗಳು ಪುನಾರಂಭಗೊಳ್ಳಲು ಅವಕಾಶ ನೀಡಲಾಗಿದೆ. ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಎರಡೂ ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದಿರಬೇಕು.
ಇದರ ಮಧ್ಯೆ ನವೆಂಬರ್ 1ರಿಂದ ಶಾಲೆಗಳು ಪುನಾರಂಭಕ್ಕೆ ಅನುಮತಿ ನೀಡಲಾಗಿದೆ. ಕರ್ನಾಟಕ, ತಮಿಳುನಾಡು ಸೇರಿ ಅನೇಕ ರಾಜ್ಯಗಳಲ್ಲಿ ಈಗಾಗಲೇ ಶೇ. 100ರಷ್ಟು ಆಸನದೊಂದಿಗೆ ಚಿತ್ರಮಂದಿರ ರೀ ಒಪನ್ಗೆ ಅವಕಾಶ ನೀಡಲಾಗಿದೆ.