ನವದೆಹಲಿ: ವಿಮಾನದೊಳಗೆ ಪ್ರಯಾಣಿಕನೋರ್ವ ಸಿಗರೇಟ್ ಸೇದುತ್ತಿರುವ ವಿಡಿಯೋ ವೈರಲ್ ಆಗಿದೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತನಿಖೆಗೆ ಆದೇಶಿಸಿದ್ದಾರೆ.
ಸೀಟ್ನಲ್ಲಿ ಮಲಗಿಕೊಂಡಿರುವ ಪ್ರಯಾಣಿಕ ಕಾಲಿನ ಮೇಲೆ ಕಾಲು ಹಾಕಿ ರಾಜಾರೋಷವಾಗಿ ಸಿಗರೇಟ್ ಸೇದುತ್ತಿರುವುದು ವಿಡಿಯೋದಲ್ಲಿದೆ. ಕಳೆದ ಜನವರಿಯಲ್ಲಿ ದುಬೈನಿಂದ ದೆಹಲಿಗೆ ಬರುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ವಿಮಾನಯಾನದಲ್ಲಿ ಬೆಂಕಿಪೊಟ್ಟಣ, ಲೈಟರ್ ಆಗಲಿ ತೆಗೆದುಕೊಂಡು ಹೋಗುವಂತಿಲ್ಲ. ಪ್ರಯಾಣಿಕರು ವಿಮಾನ ಹತ್ತಬೇಕಾದರೆ ಸಿಬ್ಬಂದಿ ತಪಾಸಣೆಗೆ ಒಳಪಡಿಸುತ್ತಾರೆ. ಆದರೂ, ಈ ಪ್ರಯಾಣಿಕ ಹೇಗೆ ಸಿಗರೇಟ್ ತೆಗೆದುಕೊಂಡು ಹೋದ? ಹಾಗೂ ವಿಮಾನದಲ್ಲಿ ರಾಜಾರೋಷವಾಗಿ ಸೇದಲು ಅವಕಾಶ ಸಿಕ್ಕಿದ್ದೇಗೆ ಎಂಬೆಲ್ಲ ಪ್ರಶ್ನೆಗಳು ಉದ್ಭವಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ವಿಡಿಯೋ ಬಗ್ಗೆ ತನಿಖೆ ನಡೆಸಲಾಗುತ್ತದೆ. ಇಂತಹ ಅಪಾಯಕಾರಿ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ರಾಜ್ಯಸಭಾ ಸದಸ್ಯ ಸೀಚೆವಾಲ್ ವಿರುದ್ಧ ಭೂಕಬಳಿಕೆ ಆರೋಪ: ತನಿಖೆಗೆ ಒತ್ತಾಯ