ಕರ್ನಾಟಕ

karnataka

ETV Bharat / bharat

ಆಡುತ್ತಾ ಆಡುತ್ತಾ ಸರ್ಕಲ್​ ಇನ್ಸ್​ಪೆಕ್ಟರ್​ ಸಾವು: ಕ್ಷಣಮಾತ್ರದಲ್ಲಿ ಹಾರಿಹೋದ ಪ್ರಾಣಪಕ್ಷಿ - ವಿಡಿಯೋ - ಆಂಧ್ರಪ್ರದೇಶ

ಬ್ಯಾಡ್ಮಿಂಟನ್​ ಆಡುತ್ತಿದ್ದಾಗ ಹೃದಯಾಘಾತವಾಗಿ ಸರ್ಕಲ್​ ಇನ್ಸ್​ಪೆಕ್ಟರ್​ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ನಿಡಮರು ಭುವನ್‌ಪಲ್ಲಿಯಲ್ಲಿ ನಡೆದಿದೆ.

CI died due to  heart attack
ಕ್ಷಣಮಾತ್ರದಲ್ಲಿ ಪ್ರಾಣಪಕ್ಷಿ ಹಾರಿಹೋದ ವಿಡಿಯೋ

By

Published : Mar 24, 2021, 9:28 AM IST

ಆಂಧ್ರಪ್ರದೇಶ:ಸರ್ಕಲ್​ ಇನ್ಸ್​ಪೆಕ್ಟರ್​ ಬ್ಯಾಡ್ಮಿಂಟನ್​ ಆಡುತ್ತಿದ್ದಾಗ ಹೃದಯಾಘಾತವಾಗಿ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ನಿಡಮರು ಭುವನ್‌ಪಲ್ಲಿಯಲ್ಲಿ ನಡೆದಿದೆ.

ಕ್ಷಣಮಾತ್ರದಲ್ಲಿ ಪ್ರಾಣಪಕ್ಷಿ ಹಾರಿಹೋದ ವಿಡಿಯೋ

ಗಣಪವರಂನ ಸಿಐ ದೆಗಲಾ ಪ್ರಸಾದ್ (42) ಮೃತರು. ಇವರು ಎಂದಿನಂತೆ ಕರ್ತವ್ಯ ಮುಗಿಸಿದ ನಂತರ ಭುವನಪಲ್ಲಿಗೆ ಬ್ಯಾಡ್ಮಿಂಟನ್ ಆಡಲು ಹೋಗಿದ್ದಾರೆ. ಈ ವೇಳೆ, ಆಟ ಆಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿದೆ. ಕುಸಿದುಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಇದನ್ನು ಓದಿ:'ಲಾಥ್ಮಾರ್ ಹೋಳಿ': ಪುರುಷರಿಗೆ ಮಹಿಳೆಯರು ಕೋಲಿನಿಂದ ಹೊಡೆಯುವುದು ಇಲ್ಲಿನ ಸಂಪ್ರದಾಯ!

ಸಿಐಗೆ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇನ್ನು ಪ್ರಸಾದ್​ ಸಾವಿಗೆ ಅನೇಕ ಗಣ್ಯರು, ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details