ಬಾಗ್‌ಪತ್(ಉತ್ತರಪ್ರದೇಶ):ಪ್ರಾರ್ಥನೆ ಸಲ್ಲಿಸಲು ಬಂದ 11 ವರ್ಷದ ಬಾಲಕಿಯ ಚರ್ಚ್ ಪಾದ್ರಿಯೊಬ್ಬ ಅತ್ಯಾಚಾರ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ಪಾದ್ರಿಯಾದ ಆಲ್ಬರ್ಟ್ನನ್ನು ಬಂಧಿಸಲಾಗಿದೆ. ಇಲ್ಲಿನ ಚಾಂದಿನಗರ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ.
ಪ್ರಾರ್ಥಿಸಲು ಬಂದ ಬಾಲಕಿ ಮೇಲೆ ಚರ್ಚ್ ಪಾದ್ರಿ ಅತ್ಯಾಚಾರ, ಬಂಧನ - ಉತ್ತರಪ್ರದೇಶದಲ್ಲಿ ಬಾಲಕಿ ಮೇಲೆ ಚರ್ಚ್ ಪಾದ್ರಿ ಅತ್ಯಾಚಾರ
ಉತ್ತರಪ್ರದೇಶದ ಚಾಂದಿನಗರದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದ ಬಾಲಕಿಯ ಮೇಲೆ ಚರ್ಚ್ ಪಾದ್ರಿಯೊಬ್ಬ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ಪ್ರಕರಣದಲ್ಲಿ ಪಾದ್ರಿಯನ್ನು ಬಂಧಿಸಲಾಗಿದೆ.
ಚರ್ಚ್ ಪಾದ್ರಿ ಅತ್ಯಾಚಾರ
ವಿವರ: ಬಾಲಕಿ ಚರ್ಚ್ಗೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದಾಳೆ. ಈ ವೇಳೆ ಅಲ್ಲಿನ ಪಾದ್ರಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ, ಈ ಬಗ್ಗೆ ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದಾನೆ. ಬಳಿಕ ಮನೆಗೆ ಬಂದ ಬಾಲಕಿ ತನ್ನ ತಾಯಿಯ ಬಳಿ ಅಮಾನುಷ ಕೃತ್ಯವನ್ನು ಹೇಳಿಕೊಂಡಿದ್ದಾಳೆ. ತಾಯಿ ಈ ಬಗ್ಗೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಾದ್ರಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ನೋಡಿ: ಮಹಾರಾಷ್ಟ್ರದಲ್ಲಿ ಎಟಿಎಂ ಎಗರಿಸಲು ಜೆಸಿಬಿ ತಂದ ದರೋಡೆಕೋರರು!