ಕರ್ನಾಟಕ

karnataka

By

Published : Dec 25, 2021, 6:17 AM IST

Updated : Dec 25, 2021, 6:27 AM IST

ETV Bharat / bharat

ಗುಪ್ತ ಉಡುಗೊರೆಗಳ ಹಿಂದಿದೆ ಸಾಂತಾ ಕ್ಲಾಸ್ ಕಥೆ.. ಕ್ರಿಸ್​ಮಸ್​ನಲ್ಲಿ ನಿಕೋಲಸ್​ ಸ್ಮರಣೆ

ಸರ್ವರಿಗೂ ಕ್ರಿಸ್​ಮಸ್​ ಹಬ್ಬದ ಶುಭಾಶಯಗಳು.. ಈ ಹಬ್ಬದಂದು ಸಾಂತಾ ಕ್ಲಾಸ್​ ಸಾಕ್ಸ್​ನಲ್ಲಿ ಉಡುಗೊರೆ ಕೊಡ್ತಾರೆ. ಏಕೆ ಗೊತ್ತಾ?, ಈ ಸಾಂತಾ ಕ್ಲಾಸ್ ಬಗ್ಗೆ ನಿಮಗೆಷ್ಟು ಗೊತ್ತು?, ಹಬ್ಬದ​ ಸಮಯದಲ್ಲಿ ಸಾಕ್ಸ್‌ನಲ್ಲಿ ಉಡುಗೊರೆ ನೀಡುವುದು ಯಾಕೆ ಎಂಬುದರ ಬಗ್ಗೆ ತಿಳಿಯೋಣಾ ಬನ್ನಿ...

Happy Christmas, Christmas Special story,  Do you know who Santa Claus, Santa Claus story, ಹ್ಯಾಪಿ ಕ್ರಿಸ್​ಮಸ್​​, ಕ್ರಿಸ್​ಮಸ್​ ಹಬ್ಬದ ವಿಶೇಷ ಸುದ್ದಿಗಳು, ಸಾಂಟಾ ಕ್ಲಾಸ್ ಕಥೆ, ಸಾಂಟಾ ಕ್ಲಾಸ್ ಯಾರು,
ಸಾಂದರ್ಭಿಕ ಚಿತ್ರ

ಕಥೆಗಳ ಪ್ರಕಾರ ನಾಲ್ಕನೇ ಶತಮಾನದಲ್ಲಿ ಸೇಂಟ್ ನಿಕೋಲಸ್ ಎಂಬ ವ್ಯಕ್ತಿ ಮೈರಾದಲ್ಲಿ (ಈಗಿನ ಟರ್ಕಿ) ವಾಸಿಸುತ್ತಿದ್ದರು. ಆತ ತುಂಬಾ ಶ್ರೀಮಂತ. ಸುಖವಾಗಿದ್ದ ನಿಕೋಲಸ್​​ ತನ್ನ ಪೋಷಕರನ್ನು ಕಳೆದುಕೊಳ್ಳುತ್ತಾನೆ. ಇದಾದ ಬಳಿಕ ಅನಾಥನಾಗಿದ್ದ ನಿಕೋಲಸ್​​ ಯಾವಾಗಲೂ ಬಡವರಿಗೆ ರಹಸ್ಯವಾಗಿ ಸಹಾಯ ಮಾಡುತ್ತಿದ್ದ. ಆತ ರಹಸ್ಯ ಉಡುಗೊರೆಗಳನ್ನು ನೀಡುವ ಮೂಲಕ ಜನರನ್ನು ಸಂತೋಷಪಡಿಸುತ್ತಿದ್ದನು. ಈ ಮೂಲಕ ನಿಕೋಲಸ್​ ತನ್ನ ದುಃಖ ಮರೆಯುತ್ತಿದ್ದನು.

ಸಾಂದರ್ಭಿಕ ಚಿತ್ರ

ಮೈರಾದಲ್ಲಿ ವಾಸಿಸುತ್ತಿದ್ದ ಒಬ್ಬ ಬಡವನಿಗೆ ಮೂರು ಹೆಣ್ಣು ಮಕ್ಕಳಿದ್ದರು. ಅವರ ಮದುವೆಗೆ ಹಣವಿಲ್ಲದೇ ಆತ ಸಂಕಷ್ಟಕ್ಕೆ ಒಳಗಾಗಿದ್ದ. ಈ ವಿಷಯ ನಿಕೋಲಸ್‌ಗೆ ತಿಳಿಯಿತು. ಇದನ್ನು ತಿಳಿದ ನಿಕೋಲಸ್ ಈ ವ್ಯಕ್ತಿಗೆ ಸಹಾಯ ಮಾಡಲು ಮುಂದಾದನು.

ಆಗ ಪ್ರಪಂಚದಾದ್ಯಂತ ಕ್ರಿಸ್‌ಮಸ್ ಸಂಭ್ರಮಾಚರಣೆ ನಡೆಯುತ್ತಿತ್ತು. ಆಗ ನಿಕೋಲಸ್​ ಸಾಕ್ಸ್‌ಗಳಲ್ಲಿ ಚಿನ್ನಹಾಕಿ ಈ ಚೀಲವನ್ನು ಮನೆಯ ಛಾವಣಿ ಮೇಲೆ ಬಿಸಾಕಿದನು. ಒಂದಲ್ಲ, ಎರಡಲ್ಲ ಮೂರು ಬಾರಿ ಚಿನ್ನ ತುಂಬಿದ ಸಾಕ್ಸ್​ನ್ನು ಆ ಬಡ ಹೆಣ್ಣು ಮಕ್ಕಳ ಕುಟುಂಬದ ಮನೆ ಮೇಲೆ ಎಸೆದನು.

ಕೊನೆಗೆ ಒಂದು ಬಾರಿ ನಿಕೋಲಸ್​ ಮಾಡುತ್ತಿದ್ದ ಸಹಾಯ ವ್ಯಕ್ತಿಯೊಬ್ಬರ ಕಣ್ಣಿಗೆ ಬಿತ್ತು. ಇದನ್ನು ಯಾರಿಗೂ ಹೇಳಬಾರದೆಂದು ನಿಕೋಲಸ್ ಕೇಳಿಕೊಂಡನು. ಆದರೆ ಆ ವಿಷಯ ಊರು ತುಂಬೆಲ್ಲ ಹಬ್ಬಿತು. ಆ ದಿನದಿಂದ ಯಾರಿಗಾದರೂ ರಹಸ್ಯ ಉಡುಗೊರೆ ಸಿಕ್ಕರೆ ಅದು ನಿಕೋಲಸ್ ಕೊಟ್ಟದ್ದು ಎಂದು ಎಲ್ಲರೂ ಭಾವಿಸುತ್ತಾರೆ. ಕ್ರಮೇಣ ನಿಕೋಲಸ್​ನ ಈ ಕಥೆ ಜನಪ್ರಿಯವಾಯಿತು.

ನಿಕೋಲಸ್‌ನ ಕಥೆಯು ಮೊದಲು ಯುಕೆಯಲ್ಲಿ ಜನಪ್ರಿಯವಾಯಿತು. ಅವನಿಗೆ ಫಾದರ್ ಕ್ರಿಸ್ಮಸ್ ಮತ್ತು ಓಲ್ಡ್ ಮ್ಯಾನ್ ಕ್ರಿಸ್ಮಸ್ ಎಂದು ಹೆಸರಿಸಲಾಯಿತು. ಬಳಿಕ ಕ್ರಿಸ್‌ಮಸ್ ದಿನದಂದು ಮಕ್ಕಳಿಗೆ ಉಡುಗೊರೆಗಳನ್ನು ನೀಡುವುದು ವಾಡಿಕೆ ಆಯಿತು.

ಸಾಂದರ್ಭಿಕ ಚಿತ್ರ

ಇದಾದ ನಂತರ ಕ್ರಿಸ್‌ಮಸ್ ದಿನದಂದು ಸಾಕ್ಸ್‌ನಲ್ಲಿ ಉಡುಗೊರೆಗಳನ್ನು ನೀಡುವ ಪದ್ಧತಿ, ಅಂದರೆ ಸೀಕ್ರೆಟ್ ಸಾಂತಾ ಆಗುವುದು ಪ್ರಪಂಚದಾದ್ಯಂತ ಮುಂದುವರಿಯಿತು. ಸೀಕ್ರೆಟ್​ ಸಾಂತಾ ಆಗುವ ಮೂಲಕ ಇಂದಿಗೂ ಅನೇಕರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಈ ಪದ್ಧತಿ ಮುಂದುವರೆಸಿದ್ದಾರೆ.

ಮೂಲಗಳ ಪ್ರಕಾರ ಈಗ ಜನಪ್ರಿಯವಾಗಿರುವ ಡೊಳ್ಳುಹೊಟ್ಟೆಯಂತೆ, ನಗುವಿನ ಸಾಂತಾ ನಿಕೋಲಸ್​ ಆಗಿರಲಿಲ್ಲವಂತೆ. ಸದಾ ಬಾಯಲ್ಲಿ ಪೈಪ್​ ಹಿಡಿದು, ಓಡಾಡುತ್ತಿದ್ದನಂತೆ. ಈಗ ಎಲ್ಲೆಡೆ ಜನಪ್ರಿಯವಾಗಿರುವ ಕೆಂಪು ಬಟ್ಟೆಯ, ದಪ್ಪ ಸಾಂತಾ ಸುಖ ಸಂತೋಷದ ಸಮೃದ್ಧಿ ಸಾಂತಾ ಜನ ಮೆಚ್ಚುಗೆ ಪಡೆದಿದ್ದಾರೆ.

Last Updated : Dec 25, 2021, 6:27 AM IST

ABOUT THE AUTHOR

...view details