ಕೊಟ್ಟಾಯಂ: ಇಲ್ಲೋರ್ವ ಕಾರ್ಮಿಕ ಬರೋಬ್ಬರಿ 12 ಕೋಟಿ ರೂ. ಗಳನ್ನು ಲಾಟರಿ ಮೂಲಕ ಗೆದ್ದಿದ್ದಾರೆ. ಸದಾನಂದನ್ ಎಂಬುವರು ಕ್ರಿಸ್‌ಮಸ್-ಹೊಸ ವರ್ಷದ ಬಂಪರ್ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು.
ಕೊಟ್ಟಾಯಂ ಪಟ್ಟಣದ ಐಮನಂನ ಸಿ ಎನ್ ಸದಾನಂದನ್ ಅವರು ಮನೆಗೆ ಮಾಂಸವನ್ನು ಖರೀದಿಸಿ ಹಿಂದಿರುಗುತ್ತಿದ್ದಾಗ ತಮ್ಮ ಸ್ನೇಹಿತ ಹಾಗೂ ಲಾಟರಿ ಏಜೆಂಟ್ ಸೆಲ್ವಕುಮಾರ್ ಅವರಿಂದ ಈ ಲಾಟರಿ ಖರೀದಿ ಮಾಡಿದ್ದರು.
ಮಧ್ಯಾಹ್ನ 3 ಗಂಟೆ ವೇಳೆಗೆ ಅವರಿಗೆ ಪ್ರಥಮ ಬಹುಮಾನ ಬಂದಿರುವುದು ತಿಳಿದಿದೆ. ಇನ್ನು ವಿಜೇತ ಪಟ್ಟಿಯನ್ನು ಬಿಡುಗಡೆ ಮಾಡುವ 5 ಗಂಟೆಗಳ ಮುನ್ನ ಲಾಟರಿ ಖರೀದಿ ಮಾಡಿದ್ದರು. ಇದೆಲ್ಲವೂ ಪರಮಾತ್ಮನ ಆಶೀರ್ವಾದದಿಂದಾಗಿ ಬಂದಿದೆ. ನನ್ನ ಮಕ್ಕಳು ಸಾಲಗಾರರಾಗಿದ್ದಾರೆ, ಅದನ್ನು ತೀರಿಸಬೇಕಾಗಿದೆ. ನಾನು ಮನೆಯನ್ನು ಮರುನಿರ್ಮಾಣ ಮಾಡಲು ಬಯಸುತ್ತೇನೆ ಎನ್ನುತ್ತಾರೆ ವೃತ್ತಿಯಲ್ಲಿ ಪೇಂಟರ್ ಆಗಿರುವ ಸದಾನಂದನ್. ಆದಾಯ ತೆರಿಗೆ ಮತ್ತು ಲಾಟರಿ ಏಜೆಂಟರ ಕಮಿಷನ್ ಕಡಿತದ ನಂತರ ಸದಾನಂದನ್ 7.39 ಕೋಟಿ ರೂ. ಪಡೆಯಲಿದ್ದಾರೆ.