ಕರ್ನಾಟಕ

karnataka

ETV Bharat / bharat

Merry Christmas-2021: ಬೇಲೂರು ಮಠದಲ್ಲಿ ಕ್ರಿಸ್​ಮಸ್ ಆಚರಣೆ, ಬೈಬಲ್ ಪಠಣ

ದೇಶಾದ್ಯಂತ ಸಂಭ್ರಮದಿಂದ ಕ್ರಿಸ್​ಮಸ್ ಹಬ್ಬವನ್ನು ಆಚರಣೆ ಮಾಡಲಾಗಿದ್ದು, ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಬೇಲೂರು ಮಠದಲ್ಲಿಯೂ ಕ್ರಿಸ್​ಮಸ್ ಆಚರಣೆ ಮಾಡಲಾಗಿದೆ.

christmas-eve-celebration-at-belur-math
ಪ.ಬಂಗಾಳದ ಬೇಲೂರು ಮಠದಲ್ಲಿ ಕ್ರಿಸ್​ಮಸ್ ಆಚರಣೆ, ಬೈಬಲ್ ಪಠಣ

By

Published : Dec 25, 2021, 1:28 PM IST

Updated : Dec 25, 2021, 1:51 PM IST

ಬೇಲೂರು(ಪಶ್ಚಿಮ ಬಂಗಾಳ): ಭಾರತ ಸರ್ವಧರ್ಮ ಸಮನ್ವಯತೆಯಿಂದ ಕೂಡಿದ ಅತ್ಯಪರೂಪದ ದೇಶ. ಇಲ್ಲಿ ಎಲ್ಲಾ ಧರ್ಮದ ಜನರೂ ಶತಮಾನಗಳಿಂದ ಪರಸ್ಪರ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಈಗಲೂ ಸಹ ಒಂದು ಧರ್ಮದ ಹಬ್ಬವನ್ನೂ ಎಲ್ಲಾ ಧರ್ಮೀಯರೂ ಆಚರಿಸುವ ಪರಂಪರೆ ಅಲ್ಲಲ್ಲಿ ಮುಂದುವರೆದಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಪಶ್ಚಿಮ ಬಂಗಾಳದ ಬೇಲೂರು ಮಠ.

ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಇರುವ ರಾಮಕೃಷ್ಣ ಮಠಗಳ ಮತ್ತು ರಾಮಕೃಷ್ಣ ಮಿಷನ್ ಸಂಸ್ಥೆಗಳ ಮುಖ್ಯ ಕಚೇರಿ ಎಂದು ಕರೆಸಿಕೊಳ್ಳುವ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿರುವ ಬೇಲೂರು ಮಠದಲ್ಲಿ ಕ್ರಿಸ್​ಮಸ್ ಆಚರಿಸಲಾಗಿದೆ.

ಬೇಲೂರು ಮಠದಲ್ಲಿ ಕ್ರಿಸ್​ಮಸ್ ಆಚರಣೆ

ಕೇವಲ ಬೇಲೂರು ಮಠದಲ್ಲಿ ಮಾತ್ರವಲ್ಲದೇ ಎಲ್ಲಾ ರಾಮಕೃಷ್ಣ ಮಠಗಳಲ್ಲೂ ಕ್ರಿಸ್​ಮಸ್ ಆಚರಣೆ ಮಾಡಲಾಗುತ್ತಿದೆ. ಸದ್ಯಕ್ಕೆ ಬೇಲೂರು ಮಠದಲ್ಲಿ ಯೇಸು ಕ್ರಿಸ್ತನ ಆರಾಧನೆ ಮಾತ್ರವಲ್ಲದೇ ಬೈಬಲ್ ಅನ್ನು ಪಠಣ ಮಾಡುವುದರೊಂದಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ.

ಕ್ರಿಸ್​ಮಸ್ ಆಚರಣೆ

ಯೇಸುವಿನ ಭಾವಚಿತ್ರದ ಮುಂದೆ ಕೇಕ್, ಹಣ್ಣುಗಳು ಮತ್ತು ಕಾಫಿಯನ್ನು ಇರಿಸಿ ಪ್ರಾರ್ಥನೆ ಸಲ್ಲಿಸಲಾಗಿದ್ದು, ಈ ಪ್ರಾರ್ಥನೆಯಲ್ಲಿ ಮಠದ ಮುಖ್ಯಸ್ಥರು ಮತ್ತು ಮುಖಂಡರು ಹಾಗೂ ಕೆಲವು ಕ್ರೈಸ್ತ ಸಮುದಾಯದವರೂ ಪಾಲ್ಗೊಂಡು ಭಾವೈಕ್ಯತೆ ಮೆರೆದಿದ್ದಾರೆ.

ಇದನ್ನೂ ಓದಿ:ದೇಶಾದ್ಯಂತ ಸಂಭ್ರಮದ ಕ್ರಿಸ್​ಮಸ್ ​: ರಾಷ್ಟ್ರಪತಿ ಮತ್ತು ಪ್ರಧಾನಿಯಿಂದ ಶುಭಾಶಯ

Last Updated : Dec 25, 2021, 1:51 PM IST

ABOUT THE AUTHOR

...view details