ಕರ್ನಾಟಕ

karnataka

ETV Bharat / bharat

ಈ ಚರ್ಚ್​ನಲ್ಲಿ ಕ್ರಿಸ್‌ಮಸ್‌ ಆಚರಣೆ ಇಲ್ಲ: ಕಾರಣ ಕೇಳಿದರೆ ಅಚ್ಚರಿಯಾಗುತ್ತೆ! - ಕ್ರಿಸ್‌ಮಸ್‌ ಆಚರಿಸದ ಕ್ರಿಶ್ಚಿಯನ್ ಸಮುದಾಯ

ಇಂದು ವಿಶ್ವದೆಲ್ಲೆಡೆ ಕ್ರಿಸ್‌ಮಸ್‌ ಸಂಭ್ರಮ. ಆದರೆ ಇಲ್ಲೊಂದೆಡೆ, ಕ್ರಿಶ್ಚಿಯನ್ನರು ಕ್ರಿಸ್‌ಮಸ್‌ ಆಚರಿಸುವುದಿಲ್ಲ. ಇಂಥದ್ದೊಂದು ಪ್ರದೇಶ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿದೆ. ಇದಕ್ಕೆ ಕಾರಣವೇನು ನೋಡೋಣ.

a-christian-community-that-does-not-celebrate-christmas
ಈ ಚರ್ಚ್​ನಲ್ಲಿ ಕ್ರಿಸ್‌ಮಸ್‌ ಆಚರಣೆ ಇಲ್ಲ... ಕಾರಣ ಕೇಳಿದರೆ ಆಶ್ಚರ್ಯ ಪಡುತ್ತೀರಿ

By

Published : Dec 25, 2022, 6:33 AM IST

ರಾಂಚಿ (ಜಾರ್ಖಂಡ್‌): ಪ್ರಪಂಚದಾದ್ಯಂತ ಕ್ರಿಸ್‌ಮಸ್ ಸಂಭ್ರಮ ಮನೆಮಾಡಿದೆ. ಈಗಾಗಲೇ ಎಲ್ಲೆಡೆ ಕರೋಲ್ ಹಾಡುಗಳು ಪ್ರತಿಧ್ವನಿಸುತ್ತಿವೆ. ಚರ್ಚ್‌ಗಳು ಬಣ್ಣ ಬಣ್ಣದ ದೀಪಗಳಿಂದ ಅಲಂಕಾರಗೊಂಡಿವೆ. ಆದರೆ, ಜಾರ್ಖಂಡ್‌ನ ರಾಜಧಾನಿ ರಾಂಚಿಯ ಚರ್ಚ್​ವೊಂದರಲ್ಲಿ ಕ್ರಿಸ್‌ಮಸ್‌ಗೆ ಯಾವುದೇ ಸಿದ್ಧತೆ ಮಾಡಿಲ್ಲ.

ಸೆವೆಂತ್ ಡೇ ಅಡ್ವೆಂಟಿಸ್ಟ್ ಎಂಬ ಚರ್ಚ್​ನಲ್ಲಿ ಕ್ರಿಸ್‌ಮಸ್ ಆಚರಣೆ ಮತ್ತು ಕ್ರಿಸ್ಮಸ್ ಹೆಸರಿನಲ್ಲಿ ಯಾವುದೇ ವಿಶೇಷ ಪ್ರಾರ್ಥನೆ ನಡೆಯಲ್ಲ. ಇದಕ್ಕೆ ಇಲ್ಲಿನ ಅನುಯಾಯಿಗಳು ಕಾರಣ ಕೊಡುತ್ತಾರೆ. ಅದೇನೆಂದರೆ, ಬೈಬಲ್​ನ​ಲ್ಲಿ ಯೇಸುಕ್ರಿಸ್ತನ ಜನ್ಮ ದಿನಾಂಕದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹೀಗಾಗಿ ಧಾರ್ಮಿಕ ದೃಷ್ಟಿಕೋನದಿಂದ ಕ್ರಿಸ್ಮಸ್ ಸಂದರ್ಭದಲ್ಲಿ ಪ್ರಾರ್ಥನೆಗೆ ಯಾವುದೇ ಸಮರ್ಥನೆ ಅಲ್ಲ ಎಂದು ನಂಬುತ್ತಾರೆ.

ಕ್ರಿಸ್‌ಮಸ್ ಆಚರಿಸದೇ ಇರುವುದಕ್ಕೆ ಕಾರಣವೇನು?:ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಸೆವೆಂತ್ ಡೇ ಅಡ್ವೆಂಟಿಸ್ಟ್ ಚರ್ಚ್​ನ ಪಾದ್ರಿ ಸುಜಲ್ ಕಿಸ್ಕು, ಕ್ರಿಸ್‌ಮಸ್ ಹಬ್ಬದಂದು ವಿಶೇಷ ಪ್ರಾರ್ಥನೆ ಸಲ್ಲಿಸುವುದು ಕ್ರಿಶ್ಚಿಯನ್ ಧರ್ಮದ ಆಧ್ಯಾತ್ಮಿಕ ಆದರ್ಶಗಳ ಮೇಲೆ ಇತಿಹಾಸದಲ್ಲಿ ರಾಜವಂಶದ ಕಥೆಯನ್ನು ಹೇರಿದಂತಿದೆ. ಮಾರ್ಕ್ಸ್, ಮ್ಯಾಥ್ಯೂ, ಲ್ಯೂಕ್ ಮತ್ತು ಜಾನ್ ಬರೆದ ಸುವಾರ್ತೆಗಳಲ್ಲಿ ಯೇಸುಕ್ರಿಸ್ತನ ಜೀವನಚರಿತ್ರೆ ಇದೆ. ಆದರೆ, ಇವುಗಳಲ್ಲಿ ಯಾರೂ ಯೇಸುವಿನ ಜನ್ಮ ದಿನಾಂಕವನ್ನು ಉಲ್ಲೇಖಿಸಿಲ್ಲ ಎಂದರು.

ಕ್ರಿಸ್ತನ ನಂತರ ಹಲವಾರು ಶತಮಾನಗಳಗೆ ಕ್ರಿಶ್ಚಿಯನ್ ಧರ್ಮದ ಪ್ರಚಾರದ ಉಲ್ಲೇಖವಿದೆ. ಇವುಗಳಲ್ಲಿ ಕ್ರಿಸ್‌ಮಸ್ ಆಚರಿಸುವ ಬಗ್ಗೆ ಯಾವುದೇ ಚರ್ಚೆಯಿಲ್ಲ. ಸೆವೆಂತ್ ಡೇ ಅಡ್ವೆಂಟಿಸ್ಟ್‌ ಪ್ರೊಟೆಸ್ಟಂಟ್ ಚರ್ಚ್ ವಿಂಗ್​ನ ಗುಂಪಾಗಿದೆ. ಇದರಲ್ಲಿ, ಕ್ಯಾಥೋಲಿಕರ ಅನೇಕ ನಂಬಿಕೆಗಳನ್ನು ಪರಿಗಣಿಸಲಾಗುವುದಿಲ್ಲ. ಇಲ್ಲಿ ಮೂರ್ತಿ ಪೂಜೆ ಇಲ್ಲ ಎಂದು ಹೇಳಿದರು.

ಕ್ರಿಸ್‌ಮಸ್ ಆರಂಭವಾಗಿದ್ದು ಹೇಗೆ?: ಪಾಸ್ಟರ್ ಪ್ರಕಾರ, ಬ್ಯಾಬಿಲೋನಿಯನ್ ಇತಿಹಾಸ ಮತ್ತು ದಂತಕಥೆಯಲ್ಲಿ ನಿಮ್ರೋಡ್ ಎಂಬ ರಾಜನಿದ್ದ. ಅಲ್ಲಿನ ಆಸ್ಥಾನಿಕರು ಆತ ಮಗ ಮಿತ್ರನನ್ನು ಪವಾಡ ಪುರುಷ ಎಂದು ಕರೆಯಲು ಪ್ರಾರಂಭಿಸಿದರು. ಈ ಮಿತ್ರ ಡಿಸೆಂಬರ್ 25ರಂದು ಜನಿಸಿದ್ದ. ಈ ಮಿತ್ರನ ಜನ್ಮದಿನವನ್ನು ಆಚರಿಸಲು ಮತ್ತು ಆತನನ್ನು ಆರಾಧಿಸಲು ಸಾರ್ವಜನಿಕರನ್ನು ಒತ್ತಾಯಿಸಲಾಯಿತು. ಕ್ರಿಶ್ಚಿಯನ್ ಧರ್ಮವನ್ನು ಅಳವಡಿಸಿಕೊಂಡ ನಂತರವೂ ವರ್ಷಗಳ ಸಂಪ್ರದಾಯವು ಹಾಗೇ ಉಳಿದಿದೆ ಎಂದು ಮಾಹಿತಿ ನೀಡಿದರು.

ಈ ಆಚರಣೆಯು ಬ್ಯಾಬಿಲೋನ್​ನಿಂದ ರೋಮ್​ಗೆ ತಲುಪಿತು. ರೋಮನ್ ಚಕ್ರವರ್ತಿ ಕಾನ್ಸ್ಟಂಟೈನ್ ಕ್ರಿಶ್ಚಿಯನ್ ಧರ್ಮವನ್ನು ರಾಜ್ಯ ಧರ್ಮವೆಂದು ಘೋಷಿಸಿದ ನಂತರ, ಡಿಸೆಂಬರ್ 25ರಂದು ಕ್ರಿಸ್ತನ ಜನ್ಮದಿನವನ್ನಾಗಿ ಕ್ರಿಸ್ಮಸ್ ಎಂದು ಆಚರಿಸಲಾಯಿತು. ಅದೇ ಸಮಯದಲ್ಲಿ ಜನರು ನಿಮ್ರೋಡ್ ಅವರ ಹೆಂಡತಿ ಮತ್ತು ಮಗನ ವಿಗ್ರಹವನ್ನು ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ಪ್ರಾರಂಭಿಸಿದರು. ಇದನ್ನು ತಾಯಿ ಮೇರಿ ಮತ್ತು ಯೇಸುವಿನ ವಿಗ್ರಹವೆಂದು ಪರಿಗಣಿಸಿದರು ಎಂದು ವಿವರಿಸಿದರು.

ಈ ರೀತಿಯಾಗಿ ಡಿಸೆಂಬರ್ 25, ಯೇಸುಕ್ರಿಸ್ತನ ಜನ್ಮ ವಾರ್ಷಿಕೋತ್ಸವ ಮತ್ತು ನಂತರ ಸಾಂತಾಕ್ಲಾಸ್ನ ಉಡುಗೊರೆಗಳು ಮತ್ತು ಅಂತಹ ಅನೇಕ ಸಂಗತಿಗಳು, ಕ್ರಿಶ್ಚಿಯನ್ ಧರ್ಮದ ಅತಿದೊಡ್ಡ ಧಾರ್ಮಿಕ ಹಬ್ಬವಾಗಿ ರೂಪುಗೊಂಡವು. ನಂತರ ಪಾಶ್ಚಿಮಾತ್ಯ ದೇಶಗಳ ವಸಾಹತುಗಳಿಗೆ ಒಳಗಾದ ಪ್ರದೇಶಗಳಲ್ಲಿ ಕ್ರೈಸ್ತರಲ್ಲದವರೂ ಇದನ್ನು ಜೋರಾಗಿ ಆಚರಿಸಲು ಪ್ರಾರಂಭಿಸಿದರು.

ಕ್ಯಾಥೋಲಿಕ್ ಸಮಾಜ ಏನು ಹೇಳುತ್ತದೆ?: ಇದೇ ವಿಚಾರವಾಗಿ ರಾಂಚಿಯ ಆರ್ಚ್‌ವಿಷನ್ ಹೌಸ್‌ನ ವಿಷನ್ ಥಿಯೋಡರ್ ಮಸ್ಕರೇನ್ಹಸ್​ ಮಾತನಾಡಿ, ಯಾರು ನಂಬುತ್ತಾರೋ ಅವರಿಗೆ ನಂಬುವ ಹಕ್ಕಿದೆ. ಐತಿಹಾಸಿಕವಾಗಿ ಭಗವಂತ ಯಾವ ದಿನ ಜನಿಸಿದನೆಂದು ನಮಗೆ ತಿಳಿದಿಲ್ಲ. ಎರಡು ಸಾವಿರ ವರ್ಷಗಳ ಹಿಂದೆ. ನಮ್ಮ ಪೂರ್ವಜರು ಈ ದಿನವನ್ನು ಆರಿಸಿಕೊಂಡರು. ಈ ಸಂಪ್ರದಾಯವು ಭಗವಂತವನ್ನು ಪ್ರಪಂಚದ ಸೂರ್ಯ ಎಂದು ಪರಿಗಣಿಸಲು ಪ್ರಾರಂಭಿಸಿತು. ಅಂದರೆ ಲಾರ್ಡ್ ಜೀಸಸ್ ಕ್ರೈಸ್ಟ್​ನ ಬೆಳಕು. ಅಂದಿನಿಂದ ನಾವು ಕ್ರಿಸ್‌ಮಸ್ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಧರ್ಮದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಇದರಲ್ಲಿ ಯಾವುದೇ ಒತ್ತಾಯವಿಲ್ಲ. ಹಿಂದೂ ಧರ್ಮದಲ್ಲಿ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆಯಂತೆ, ಇದಕ್ಕೂ ಕೂಡ ಮನ್ನಣೆ ಇದೆ. ಇಡೀ ನಾಡಿನ ಸುಖ, ಶಾಂತಿ, ಸಮೃದ್ಧಿಗೆ ನಾನು ಪ್ರಾರ್ಥಿಸುತ್ತೇವೆ. ಅಡ್ವೆಂಟಿಸ್ಟ್‌ಗಳು ತಮ್ಮ ನಂಬಿಕೆಗಳೊಂದಿಗೆ ನಡೆದರೆ, ಅವರು ನಡೆಯಲಿ ಎಂದು ತಿಳಿಸಿದರು.

ಸೆವೆಂತ್ ಡೇ ಅಡ್ವೆಂಟಿಸ್ಟ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಆಚರಿಸದಿರುವ ಮಾಹಿತಿಯ ಮೇರೆಗೆ ಈಟಿವಿ ಭಾರತ್​ನ ರಾಂಚಿ ಬ್ಯೂರೋ ಮುಖ್ಯಸ್ಥ ರಾಜೇಶ್ ಕುಮಾರ್ ಸಿಂಗ್ ಅವರು ಚರ್ಚ್‌ಗೆ ಭೇಟಿ ನೀಡಿದ್ದರು. ಆಗ ಚರ್ಚ್​​ಗೆ ಬೀಗ ಹಾಕಲಾಗಿತ್ತು. ಈ ವೇಳೆ ಮತ್ತೊಂದು ಚರ್ಚ್‌ನಲ್ಲಿ ಕ್ರಿಸ್‌ಮಸ್‌ಗಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದವು.

ಇದನ್ನೂ ಓದಿ:ಸಿಖ್ಖರಿಗೆ ಗಡ್ಡ, ಪೇಟ ಧರಿಸಿ ದೇಶ ಸೇವೆ ಸಲ್ಲಿಸಲು ಅನುಮತಿ ನೀಡಿದ ಅಮೆರಿಕ ನ್ಯಾಯಾಲಯ

ABOUT THE AUTHOR

...view details