ಕರ್ನಾಟಕ

karnataka

ETV Bharat / bharat

ಹೆಲಿಕಾಪ್ಟರ್​ ದುರಂತ : ಜಿತೇಂದ್ರಕುಮಾರ್​ ವರ್ಮಾ ಕುಟುಂಬಕ್ಕೆ 1 ಕೋಟಿ ರೂ., ಸರ್ಕಾರಿ ಉದ್ಯೋಗದ ಭರವಸೆ

ನಮ್ಮ ಮಣ್ಣಿನ ಮಗನಾದ, ಹೆಲಿಕಾಪ್ಟರ್​ ಅವಘಡದಲ್ಲಿ ನಿಧನರಾದ ಜಿತೇಂದ್ರ ಕುಮಾರ್​ ವರ್ಮಾ ಅವರ ಕುಟುಂಬಸ್ಥರಿಗೆ ಪರಿಹಾರವಾಗಿ 1 ಕೋಟಿ ರೂಪಾಯಿ ಹಾಗೂ ಅವರ ಪತ್ನಿ ಹಾಗೂ ಪುತ್ರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು..

chopper crash
ಮಧ್ಯಪ್ರದೇಶ ಸಿಎಂ

By

Published : Dec 12, 2021, 6:12 PM IST

ಭೋಪಾಲ್​(ಮಧ್ಯಪ್ರದೇಶ) :ತಮಿಳುನಾಡಿನ ಕೂನೂರು ಬಳಿ ನಡೆದ ಸೇನಾ ಹೆಲಿಕಾಫ್ಟರ್​ ದುರಂತದಲ್ಲಿ ಮೃತಪಟ್ಟ ಮಧ್ಯಪ್ರದೇಶದ ಲ್ಯಾನ್ಸ್​ ನಾಯಕ್​ ಜಿತೇಂದ್ರ ಕುಮಾರ್​ ವರ್ಮಾ ಅವರ ಕುಟುಂಬಸ್ಥರಿಗೆ 1 ಕೋಟಿ ರೂಪಾಯಿ ಹಾಗೂ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಘೋಷಿಸಿದ್ದಾರೆ.

ಸೆಹೋರ್​ ಜಿಲ್ಲೆಯ ಧಮಂಡಾ ಗ್ರಾಮದಲ್ಲಿ ಭಾನುವಾರ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಶಿವರಾಜ್ ಸಿಂಗ್​ ಚೌಹಾಣ್​ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮಣ್ಣಿನ ಮಗನಾದ, ಹೆಲಿಕಾಪ್ಟರ್​ ಅವಘಡದಲ್ಲಿ ನಿಧನರಾದ ಜಿತೇಂದ್ರ ಕುಮಾರ್​ ವರ್ಮಾ ಅವರ ಕುಟುಂಬಸ್ಥರಿಗೆ ಪರಿಹಾರವಾಗಿ 1 ಕೋಟಿ ರೂಪಾಯಿ ಹಾಗೂ ಅವರ ಪತ್ನಿ ಹಾಗೂ ಪುತ್ರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.

ಇದಲ್ಲದೇ, ವರ್ಮಾ ಅವರ ಹುಟ್ಟೂರಾದ ಧಮಂಡಾದಲ್ಲಿ ವೀರಪುತ್ರನ ಸ್ಮಾರಕ ನಿರ್ಮಾಣ ಮಾಡಲಾಗುವುದು. ಕಾಲೇಜೊಂದಕ್ಕೆ ಜಿತೇಂದ್ರ ಕುಮಾರ್​ ವರ್ಮಾರ ಹೆಸರಿಡಲಾಗುವುದು ಎಂದು ಅವರು ಇದೇ ವೇಳೆ ಘೋಷಿಸಿದ್ದಾರೆ.

ಇದನ್ನೂ ಓದಿ: 70 ವರ್ಷದಲ್ಲಿ ಕಾಂಗ್ರೆಸ್ ಕಟ್ಟಿದ್ದನ್ನು ಬಿಜೆಪಿ 7 ವರ್ಷದಲ್ಲಿ ಮಾರ್ತಿದೆ: ಪ್ರಿಯಾಂಕಾ ಗಾಂಧಿ

ಜಿತೇಂದ್ರ ಕುಮಾರ್​ ವರ್ಮಾ ಅವರು ಭಾರತೀಯ ಮೂರು ಸೇನಾಪಡೆಗಳ ಮುಖ್ಯಸ್ಥರಾಗಿದ್ದ (ಸಿಡಿಎಸ್​) ಬಿಪಿನ್​ ರಾವತ್​ ಅವರ ಭದ್ರತಾ ತಂಡದಲ್ಲಿ ಒಬ್ಬರಾಗಿದ್ದರು.

ABOUT THE AUTHOR

...view details