ಕೊಯಮತ್ತೂರು (ತಮಿಳುನಾಡು):ನಿನ್ನೆ ತಮಿಳುನಾಡಿನ ನೀಲಿಗಿರಿಯ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಸಿ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದು, ಅವರ ಪಾರ್ಥಿವ ಶರೀರ ಕೊಯಮತ್ತೂರಿನ ಸುಲೂರು ಏರ್ಬೇಸ್ಗೆ ತೆಗೆದುಕೊಂಡು ಬರಲಾಗಿದೆ.
ಪಾರ್ಥಿವ ಶರೀರ ಹೊತ್ತು ಸೇನಾ ಏರ್ಬೇಸ್ ಸುಲೂರ್ಗೆ ಬರುತ್ತಿದ್ದ ಆ್ಯಂಬುಲೆನ್ಸ್ವೊಂದು ಅಪಘಾತಕ್ಕೀಡಾಗಿದ್ದು, ಈ ವೇಳೆ ಕೆಲ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣವೇ ಯೋಧರ ಪಾರ್ಥಿವ ಶರೀರವನ್ನ ಬೇರೊಂದು ಆ್ಯಂಬುಲೆನ್ಸ್ಗೆ ಶಿಫ್ಟ್ ಮಾಡಿ ಏರ್ಬೇಸ್ಗೆ ತರಲಾಗಿದೆ.
ಯೋಧರ ಪಾರ್ಥಿವ ಶರೀರ ಹೊತ್ತೊಯ್ಯುತ್ತಿದ್ದ ಆ್ಯಂಬುಲೆನ್ಸ್ ಅಪಘಾತ ಇದನ್ನೂ ಓದಿರಿ:'ಗಂಡನ ಬಗ್ಗೆ ಹೆಮ್ಮೆ ಇದೆ'... ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ಸತ್ಪಾಲ್ ರಾಯ್ ಪತ್ನಿ ಕಣ್ಣೀರು
ಅಪಘಾತದ ವೇಳೆ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ರೀತಿಯ ಪ್ರಾಣಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.ನಿನ್ನೆ ತಮಿಳುನಾಡಿಗೆ ಉಪನ್ಯಾಸ ನೀಡಲು ಬಿಪಿನ್ ರಾವತ್, ಅವರ ಪತ್ನಿ ಮಧುಲತಾ ಸೇರಿದಂತೆ ಸೇನಾ ಸಿಬ್ಬಂದಿ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ, ನೀಲಿಗಿರಿಯ ಕುನೂರಿನಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ.