ಕರ್ನಾಟಕ

karnataka

ETV Bharat / bharat

ಸಿಲಿಂಡರ್​ ಸ್ಫೋಟಗೊಂಡು ಕುಸಿದ ಮನೆ ಛಾವಣಿ: ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರ - ಛತ್ತೀಸ್​ಗಢ್​ನಲ್ಲಿ ಎಲ್​ಪಿಜಿ ಸಿಲಿಂಡರ್​ ಸ್ಫೋಟ ಸುದ್ದಿ,

ಸಿಲಿಂಡರ್​ ಸ್ಫೋಟಗೊಂಡು ಮನೆಯ ಛಾವಣಿ ಕುಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಛತ್ತೀಸ್​ಗಢದ ಚಿತ್ತೋರ್​ಗಢ್​ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

Chittorgarh LPG cylinder explosion, Chittorgarh LPG cylinder explosion news, three people died, three people died in LPG cylinder explosion, ಛತ್ತೀಸ್​ಗಢ್​ನಲ್ಲಿ ಎಲ್​ಪಿಜಿ ಸಿಲಿಂಡರ್​ ಸ್ಫೋಟ, ಛತ್ತೀಸ್​ಗಢ್​ನಲ್ಲಿ ಎಲ್​ಪಿಜಿ ಸಿಲಿಂಡರ್​ ಸ್ಫೋಟ ಸುದ್ದಿ, ಛತ್ತೀಸ್​ಗಢ್​ನಲ್ಲಿ ಎಲ್​ಪಿಜಿ ಸಿಲಿಂಡರ್​ ಸ್ಫೋಟದಲ್ಲಿ ಮೂವರು ಸಾವು,
ಸಿಲಿಂಡರ್​ ಸ್ಫೋಟಗೊಂಡು ಕುಸಿದ ಮನೆಯ ಮೇಲ್ಛಾವಣಿ

By

Published : Mar 19, 2021, 8:37 AM IST

ಚಿತ್ತೋರ್​ಗಢ್​:ಮನೆಯಲ್ಲಿ ಮಲಗಿದ್ದ ವೇಳೆ ಸಿಲಿಂಡರ್​ ಸ್ಫೋಟಗೊಂಡು ಒಂದೇ ಕುಟಂಬದ ಮೂವರು ಸಾವನ್ನಪ್ಪಿರುವ ಘಟನೆ ಇಲ್ಲಿನ ಪ್ರತಾಪ್​ ನಗರದಲ್ಲಿ ನಡೆದಿದೆ.

ಕಳೆದ ರಾತ್ರಿ ಗ್ಯಾಸ್​ ಸೋರಿಕೆಯಾದ ಹಿನ್ನೆಲೆ ಸಿಲಿಂಡರ್​ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ಕೋಣೆಯೊಂದರ ಛಾವಣಿ ಕುಸಿದು ಮಲಗಿದ್ದವರ ಮೇಲೆ ಬಿದ್ದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಸ್ಫೋಟಗೊಳ್ಳುತ್ತಿದ್ದಂತೆ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ರಕ್ಷಣಾ ಕಾರ್ಯ ಕೈಗೊಂಡು ಗಾಯಾಳುಗಳನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದರು. ಸುಮಾರು ಎರಡು ಗಂಟೆಗಳ ನಂತರ ಅಗ್ನಿಶಾಮಕ ದಳ ಬೆಂಕಿ ನಂದಿಸಿತು.

ಪುರುಷೋತ್ತಮ್ ಭನ್ಬಿ, ಅವರ ತಾಯಿ ಸಜ್ನಿ ಬಾಯಿ ಮತ್ತು ಪತ್ನಿ ಜಮುನಾ ದೇವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೈದೀಪ್, ಭೂಮಿ, ಉಮೇಶ್ ಮತ್ತು ಸೂರಜ್​ಗೆ ಸುಟ್ಟು ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉದಯಪುರ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details