ಭೋಪಾಲ್/ಮಧ್ಯಪ್ರದೇಶ :ಭೋಪಾಲ್ನ ಮಖನ್ಲಾಲ್ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 25ರಿಂದ ಆರಂಭಗೊಂಡಿದ್ದ ಚಿತ್ರ ಭಾರತಿ ಚಲನಚಿತ್ರೋತ್ಸವ ಮುಕ್ತಾಯಗೊಂಡಿದೆ. ಕಾರ್ಯಕ್ರಮದ ಕೊನೆಯ ದಿನ 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ನಟಿ 'ಪಲ್ಲವಿ ಜೋಶಿ' ಅವರನ್ನು ಸನ್ಮಾನಿಸಲಾಯಿತು.
ನಿನ್ನೆ ರವೀಂದ್ರ ಭವನದಲ್ಲಿ ನಡೆದ ಚಿತ್ರ ಭಾರತಿ ಚಲನಚಿತ್ರೋತ್ಸವದ 4ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ. ನಮ್ಮ ಸಂಸ್ಕೃತಿಯನ್ನು ಎಲ್ಲರಿಗೂ ತಿಳಿಸಬೇಕಾದರೆ ಅದಕ್ಕೆ ಸಂಬಂಧಿಸಿದ ಕಥೆಗಳನ್ನು ನಾವು ಜನರಿಗೆ ತಿಳಿಸುವುದು ಅಗತ್ಯ. ಚಿತ್ರ ಭಾರತಿ ಮೂಲಕ ಇಂತಹ ಸಿನಿಮಾಗಳು ನಿರ್ಮಾಣವಾಗುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.