ಕರ್ನಾಟಕ

karnataka

ETV Bharat / bharat

ನಿತೀಶ್​ ಕುಮಾರ್​ ಇಲ್ಲದೇ ಬಿಹಾರದಲ್ಲಿ ಎನ್​ಡಿಎ ಸರ್ಕಾರ: ಚಿರಾಗ್​ ಪಾಸ್ವಾನ್​ - ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್​

ಈಟಿವಿ ಭಾರತ ಜತೆ ಮಾತನಾಡಿರುವ ಚಿರಾಗ್​ ಪಾಸ್ವಾನ್​, ನಿತೀಶ್​ ಕುಮಾರ್ ಹಾಗೂ ತೇಜಸ್ವಿ ಯಾದವ್​ ವಿರುದ್ಧ ವಾಗ್ದಾಳಿ ನಡೆಸಿದರು.

chirag paswan
chirag paswan

By

Published : Nov 4, 2020, 9:36 PM IST

ಪಾಟ್ನಾ:ಬಿಹಾರದಲ್ಲಿನ 243 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ವೋಟಿಂಗ್​ ನಡೆಯುತ್ತಿದ್ದು, ಈಗಾಗಲೇ ಎರಡು ಹಂತದ ಮತದಾನ ಮುಕ್ತಾಯಗೊಂಡಿದೆ. ನವೆಂಬರ್​ 7ರಂದು ಕೊನೆಯ ಹಂತದ ವೋಟಿಂಗ್​ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಈಟಿವಿ ಭಾರತ ಜತೆ ಚಿರಾಗ್ ಪಾಸ್ವಾನ್ ಮಾತನಾಡಿದ್ದಾರೆ.

ಎನ್​​ಡಿಎ ಮೈತ್ರಿಕೂಟದಿಂದ ಹೊರಬಂದು ಏಕಾಂಗಿಯಾಗಿ ಕಣಕ್ಕಿಳಿದಿರುವ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥನಾಗಿರುವ ಚಿರಾಗ್​, ನಿತೀಶ್​ ಕುಮಾರ್​ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಹಾರದಲ್ಲಿ ಎನ್​ಡಿಎ ಸರ್ಕಾರ ಜೆಡಿಯು ಸಹಾಯವಿಲ್ಲದೇ ಸರ್ಕಾರ ರಚನೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಈಟಿವಿ ಭಾರತ ಜೊತೆ ಚಿರಾಗ್​ ಪಾಸ್ವಾನ್​ ಮಾತುಕತೆ

ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದು, ಎಲ್​​​​​ಜೆಪಿ ಏಕಾಂಗಿಯಾಗಿ ಕಣಕ್ಕಿಳಿದಿದೆ. ಈ ಹಿಂದಿನಿಂದಲೂ ನಿತೀಶ್ ಕುಮಾರ್​ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಚಿರಾಗ್ ಇದೀಗ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ನವೆಂಬರ್ 7ರಂದು 78 ಕ್ಷೇತ್ರಗಳಲ್ಲಿ ವೋಟಿಂಗ್​ ನಡೆಯಲಿದ್ದು, ಇದರ ಫಲಿತಾಂಶ ನವೆಂಬರ್​ 10ರಂದು ಬಹಿರಂಗಗೊಳ್ಳಲಿದೆ.

ಇದೇ ವೇಳೆ ತೇಜಸ್ವಿ ಯಾದವ್​ ವಿರುದ್ಧ ಕೂಡ ಟೀಕಾಪ್ರಹಾರ ನಡೆಸಿರುವ ಚಿರಾಗ್​, ರಾಜ್ಯದಲ್ಲಿ 10 ಲಕ್ಷ ನೌಕರಿ ನೀಡುವ ಬಗ್ಗೆ ಮಾತನಾಡುತ್ತಾರೆ. ಇದು ಹೇಗೆ ಸಾಧ್ಯ ಎಂಬುದರ ಬಗ್ಗೆ ಅವರು ಮಾತನಾಡಿಲ್ಲ. ತೇಜಸ್ವಿ ಯಾದವ್​ಗೆ ಯಾವುದೇ ರೀತಿಯ ರೋಡ್​ಮ್ಯಾಪ್​ ಇಲ್ಲ ಎಂದು ಹೇಳಿದ್ದಾರೆ.

ABOUT THE AUTHOR

...view details