ಕರ್ನಾಟಕ

karnataka

ETV Bharat / bharat

ಎಲ್‌ಜೆಪಿ ಬಿಕ್ಕಟ್ಟು; ಚಿರಾಗ್‌ ಪಾಸ್ವಾನ್‌ ಹೇಳೋದೇನು...?

ಲೋಕಸಭೆಯಲ್ಲಿ ಎಲ್‌ಜೆಪಿ ನಾಯಕ ಹುದ್ದೆಯಿಂದ ಚಿರಾಗ್‌ ಪಾಸ್ವಾನ್‌ ಅವರನ್ನು ಕೆಳಗಿಳಿಸಿದ್ದ ಸಂಬಂಧ ಚಿರಾಗ್‌ ಪಾಸ್ವಾನ್‌ ಕೊನೆಗೂ ಪ್ರತಿಕ್ರಿಯಿಸಿದ್ದು, ಅನಾರೋಗ್ಯದಿಂದ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಷ್ಟೆಲ್ಲ ಬೆಳವಣಿಗಳು ನಡೆದಿವೆ. ಸಂವಿಧಾನದ ಪ್ರಕಾರ ರಾಷ್ಟ್ರೀಯ ಅಧ್ಯಕ್ಷರು ಮೃತ ಪಟ್ಟರೆ ಅಥವಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರೆ ಮಾತ್ರ ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಿಸಬಹುದು ಎಂದು ಸಂಸದ ಪಶುಪತಿ ಕುಮಾರ್ ಪರಸ್‌ಗೆ ತಿರುಗೇಟು ನೀಡಿದ್ದಾರೆ.

chirag-paswan-ljp-split-pashupati-kumar-paras-disputes-in-party
ಎಲ್‌ಜೆಪಿ ಬಿಕ್ಕಟ್ಟು; ಚಿರಾಗ್‌ ಪಾಸ್ವಾನ್‌ ಹೇಳೋದೇನು...?

By

Published : Jun 16, 2021, 7:21 PM IST

ನವದೆಹಲಿ/ಪಾಟ್ನಾ:ಲೋಕ ಜನಶಕ್ತಿ ಪಕ್ಷದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಕೊನೆಗೂ ಮೌನ ಮುರಿದಿರುವ ಚಿರಾಗ್‌ ಪಾಸ್ವಾನ್‌, ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಆಸ್ಪತ್ರೆ ದಾಖಲಾಗಿದ್ದಾಗ ಸಂಚು ರೂಪಿಸಿದ್ದಾರೆ. ಈ ವಿಚಾರ ತಮ್ಮ ಗಮನಕ್ಕೆ ಬಂದಾಗ ಚಿಕ್ಕಪ್ಪ, ಸಂಸದ ಪಶುಪತಿ ಕುಮಾರ್ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಆದರೆ, ಅದು ಫಲಿಸಲಿಲ್ಲ ಎಂದು ಹೇಳಿದ್ದಾರೆ.

ಸಂವಿಧಾನದ ಪ್ರಕಾರ ರಾಷ್ಟ್ರೀಯ ಅಧ್ಯಕ್ಷರು ಮೃತ ಪಟ್ಟರೆ ಅಥವಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರೆ ಮಾತ್ರ ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಿಸಬಹುದು. ಆದರೆ, ಇದೀಗ ಪಶುಪತಿ ಕುಮಾರ್‌ ಪರಸ್‌ ಅವರನ್ನು ಲೋಕಸಭೆಯಲ್ಲಿ ಎಲ್‌ಜೆಪಿಯ ನಾಯಕರನ್ನಾಗಿ ನೇಮಿಸಿರುವುದು ಕಾನೂನು ಬಾಹಿರ ಎಂದಿದ್ದಾರೆ.

ಎಲ್‌ಜೆಪಿ ಬಿಕ್ಕಟ್ಟು; ಚಿರಾಗ್‌ ಪಾಸ್ವಾನ್‌ ಹೇಳೋದೇನು...?

ನನ್ನ ತಂದೆ ಆಸ್ಪತ್ರೆಗೆ ದಾಖಲಾದಾಗ ಕೆಲವರು ಪಕ್ಷವನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ನನ್ನ ತಂದೆ ನನ್ನ ಚಿಕ್ಕಪ್ಪ (ಪಶುಪತಿ ಕುಮಾರ್ ಪರಾಸ್) ಸೇರಿದಂತೆ ಪಕ್ಷದ ಮುಖಂಡರನ್ನು ಇದೇ ಬಗ್ಗೆ ಕೇಳಿದರು. ನಾವು ಎದುರಿಸಬೇಕಾದ ಹೋರಾಟಕ್ಕೆ ಕೆಲವರು ಸಿದ್ಧರಿಲ್ಲ

ಚಿರಾಗ್‌ ಪಾಸ್ವಾನ್‌ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಪಶುಪತಿ ಕುಮಾರ್‌ ಪರಸ್‌, ನಾವು ಎನ್‌ಡಿಎ ಮೈತ್ರಿಯಲ್ಲಿ ಚುನಾವಣೆ ಎದುರಿಸಬೇಕು. ಆದರೆ ಚಿರಾಗ್‌ ಪಾಸ್ವಾನ್‌ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಈ ಕಾರಣಕ್ಕಾಗಿ ಎಲ್‌ಜೆಪಿ ಕೊನೆಯ ಹಂತಕ್ಕೆ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯಾಧ್ಯಕ್ಷ ಹುದ್ದೆಯಿಂದ ನನ್ನನ್ನು ಯಾಕೆ ಕೆಳಗಿಳಿಸಿದ್ದು ಎಂಬುದನ್ನು ಕೇಳಿ ನೋಡಿ. ಅಧಿಕಾರ ಇಲ್ಲದಿದ್ದಾಗಲೇ ಹೀಗೆ ಮಾಡಿದ್ದಾರೆ. ನನ್ನ ಮುಂದಾಳತ್ವದಲ್ಲಿ ಬಿಹಾರದಲ್ಲಿ ಚುನಾವಣೆ ಎದುರಿಸಿದ್ದೆವು. ಸ್ಪರ್ಧಿಸಿದ್ದ 6 ಮಂದಿ ಸಂಸದರು ಗೆದ್ದಿದ್ದಾರೆ. ಚುನಾವಣೆ ಆಯೋಗದ ಪ್ರಕಾರ ಅತಿ ಹೆಚ್ಚು ಸಂಸದರ ಬೆಂಬಲವನ್ನು ಹೊಂದಿದ್ದೇವೆ ಎಂದು ಎಲ್‌ಜೆಪಿ ಸಂಸದ, ಚಿರಾಗ್‌ ಪಾಸ್ವಾನ್‌ ಅವರ ಚಿಕ್ಕಪ್ಪ ಪಶುಪತಿ ಕುಮಾರ್‌ ಪರಸ್‌ ಹೇಳಿದ್ದಾರೆ.

ABOUT THE AUTHOR

...view details