ಕರ್ನಾಟಕ

karnataka

ETV Bharat / bharat

ಜೆಡಿಯು​ ಪಕ್ಷಕ್ಕೆ 'ವಿಲನ್' ಆದ ಚಿರಾಗ್​: ನಿತೀಶ್​ ವಿರುದ್ಧ ಕೊನೆಗೂ ಸೇಡು ತೀರಿಸಿಕೊಂಡ ಎಲ್​ಜೆಪಿ! - ಎಲ್​ಜೆಪಿ ಚಿರಾಗ್​ ಪಾಸ್ವಾನ್​ ಸುದ್ದಿ

ಬಿಹಾರದಲ್ಲಿ ಜೆಡಿಯು ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳುವಲ್ಲಿ ಕೊನೆಗೂ ಎಲ್​ಜೆಪಿ ಚಿರಾಗ್​ ಪಾಸ್ವಾನ್​ ಯಶಸ್ವಿಯಾಗಿದ್ದಾರೆ.

chirag paswan
chirag paswan

By

Published : Nov 11, 2020, 12:00 PM IST

ಪಾಟ್ನಾ:ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಲೋಕಜನ ಶಕ್ತಿ ಪಕ್ಷ(ಎಲ್​ಜೆಪಿ) ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಕೇವಲ 1 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆದರೆ ಜೆಡಿಯು ಪಕ್ಷಕ್ಕೆ ಟಾಂಗ್​ ನೀಡುವಲ್ಲಿ ಚಿರಾಗ್​ ಪಾಸ್ವಾನ್​ ಕೊನೆಗೂ ಯಶಸ್ವಿಯಾಗಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಯಿಂದ ಹೊರಬಂದು ಕಣಕ್ಕಿಳಿದಿದ್ದ ಎಲ್​ಜೆಪಿ ಜೆಡಿಯು ಪಕ್ಷವನ್ನ ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದೆ. 243 ಕ್ಷೇತ್ರಗಳ ಪೈಕಿ ಜೆಡಿಯು 43, ಬಿಜೆಪಿ 74, ಆರ್​ಜೆಡಿ 75 ಸ್ಥಾನಗಳಲ್ಲಿ ಗೆಲುವು ಸಾಧನೆ ಮಾಡಿದ್ದು, ಇತರರು 50 ಸ್ಥಾನ ಗೆದ್ದುಕೊಂಡಿದೆ. ಆದರೆ ಎಲ್​ಜೆಪಿ ಮಾತ್ರ 1 ಸ್ಥಾನದಲ್ಲಿ ಜಯ ಸಾಧಿಸಿದೆ.

ಜೆಡಿಯುಗೆ ಟಾಂಗ್​ ನೀಡಿದ ಎಲ್​ಜೆಪಿ

ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದ ಎಲ್​ಜೆಪಿ ನಿತೀಶ್​ ಕುಮಾರ್​ ನೇತೃತ್ವದ ಜೆಡಿಯು ಪಕ್ಷ ಕಣಕ್ಕಿಳಿದಿದ್ದ ಎಲ್ಲ 115 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನ ಕಣಕ್ಕಿಳಿಸಿತ್ತು. ಈ ಮೂಲಕ ವೋಟ್​ ವಿಭಜನೆಗೊಂಡಿದ್ದರಿಂದ ಜೆಡಿಯು ಸೋಲು ಕಾಣುವಂತಾಗಿದೆ.

ಈ ಹಿಂದಿನಿಂದಲೂ ನಿತೀಶ್ ಕುಮಾರ್ ಮೇಲೆ ಹರಿಹಾಯ್ತಿದ್ದ ಚಿರಾಗ್​ ಪಾಸ್ವಾನ್​, ರಾಜಕೀಯ ಲೆಕ್ಕಾಚಾರ ಬಳಸಿಕೊಂಡು ಜೆಡಿಯು ಪಕ್ಷಕ್ಕೆ ಸರಿಯಾಗಿ ಹೊಡೆತ ನೀಡಿ, ತಮ್ಮ ಸೇಡು ಕೊನೆಗೂ ತೀರಿಸಿಕೊಂಡಿದ್ದಾರೆ. ಈ ಸಲದ ಚುನಾವಣೆಗೆ ಸೀಟು ಹಂಚಿಕೆ ವೇಳೆ ಕೂಡ ಎನ್​ಡಿಎ ಮೈತ್ರಿಕೂಟದಿಂದ ಎಲ್​ಜೆಪಿ ಹೊರಗೆ ಇಡುವಲ್ಲಿ ನಿತೀಶ್ ಕುಮಾರ್​ ಯಶಸ್ವಿಯಾಗಿದ್ದರು. ಇದೇ ಕಾರಣಕ್ಕಾಗಿ ಚಿರಾಗ್​ ಪಾಸ್ವಾನ್​ ಜೆಡಿಯು ವಿರುದ್ಧ ವಾಗ್ದಾಳಿ ನಡೆಸಿದ್ದರು.

ಮಾಹುವಾ ಕ್ಷೇತ್ರದಲ್ಲಿ ಆರ್​ಜೆಡಿ ರಾಕೇಶ್ ರೋಷನ್​ ವಿರುದ್ಧ ಜೆಡಿಯು ಅಸಮ್​ ಪರ್ವೀನ್​ 24 ಸಾವಿರ ಮತ ಪಡೆದುಕೊಂಡಿದ್ದರು. ಆದರೆ, ಎಲ್​ಜೆಪಿ ಅಭ್ಯರ್ಥಿ ಸಂಜಯ್​ ಕುಮಾರ್​​ 12 ಸಾವಿರ ಮತ ಪಡೆದುಕೊಂಡ ಕಾರಣ ಜೆಡಿಯು ಅಭ್ಯರ್ಥಿ ಸೋಲು ಕಾಣುವಂತಾಯಿತು. ಹೀಗೆ ಅನೇಕ ಕ್ಷೇತ್ರಗಳಲ್ಲಿ ಮತ ವಿಭಜನೆ ಆಗಿರುವ ಕಾರಣ ಆರ್​ಜೆಡಿ ಗೆಲುವು ಸಾಧಿಸುವಂತಾಗಿದೆ. ಕುರ್ತಾ, ನೋಖಾ, ಸಸಾರಾಂ ಸೇರಿ ಅನೇಕ ಕ್ಷೇತ್ರಗಳಲ್ಲಿ ಜೆಡಿಯು ಪಕ್ಷಕ್ಕೆ ಎಲ್​ಜೆಪಿ ಮುಳುವಾಗಿದ್ದು, ನಿತೀಶ್ ಕುಮಾರ್​ಗೆ ತಿರುಗೇಟು ನೀಡಿದ್ದಾರೆ.

ABOUT THE AUTHOR

...view details