ನವದೆಹಲಿ :ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಬಿಕ್ಕಟ್ಟಿನ ಮಧ್ಯೆ, ಪಕ್ಷದ ಸಂಸ್ಥಾಪಕ ಮತ್ತು ಮಾಜಿ ಕೇಂದ್ರ ಸಚಿವ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ನೇತೃತ್ವದ ಐದು ಸದಸ್ಯರ ನಿಯೋಗ ಚುನಾವಣಾ ಆಯೋಗವನ್ನು ಸಂಪರ್ಕಿಸಿ, ಚಿರಾಗ್ ಪಾಸ್ವಾನ್ ಅವರನ್ನು 2019ರಲ್ಲಿ ಐದು ವರ್ಷಗಳ ಅವಧಿಗೆ ಪಕ್ಷದ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ನಾನು 5 ವರ್ಷದ ಅವಧಿಗೆ ಎಲ್‌ಜೆಪಿ ಮುಖ್ಯಸ್ಥನಾಗಿ ಆಯ್ಕೆಯಾಗಿರುವೆ : ಚು. ಆಯೋಗಕ್ಕೆ ಚಿರಾಗ್ ಪಾಸ್ವಾನ್
2019ರಲ್ಲಿ ನನ್ನನ್ನು ಎಲ್‌ಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು, ರಾಷ್ಟ್ರೀಯ ಕಾರ್ಯಕಾರಿಣಿ ಆ ನಿರ್ಣಯವನ್ನು ಅಂಗೀಕರಿಸಿದ್ದರು ಎಂದು ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ..
ljp
ಚುನಾವಣಾ ಆಯೋಗವನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚಿರಾಗ್, "ಐದು ಸದಸ್ಯರ ನಿಯೋಗವು ಆಯೋಗವನ್ನು ಭೇಟಿಯಾಗಿ ವಿಷಯವನ್ನು ಅದರ ಮುಂದೆ ಇಟ್ಟಿದೆ" ಎಂದು ಹೇಳಿದರು.
2019ರಲ್ಲಿ ನನ್ನನ್ನು ಎಲ್‌ಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು, ರಾಷ್ಟ್ರೀಯ ಕಾರ್ಯಕಾರಿಣಿ ಆ ನಿರ್ಣಯವನ್ನು ಅಂಗೀಕರಿಸಿದ್ದರು ಎಂದು ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ. ನಾನು ಐದು ವರ್ಷಗಳ ಅವಧಿಗೆ ಎಲ್‌ಜೆಪಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಮತ್ತು ಪ್ರತಿ ಐದು ವರ್ಷಗಳ ನಂತರ ಪಕ್ಷದ ಮುಖ್ಯಸ್ಥರ ಚುನಾವಣೆ ನಡೆಯುತ್ತದೆ ಎಂದು ಚಿರಾಗ್ ಹೇಳಿದರು.