ನವದೆಹಲಿ:ಭಾರತ-ಚೀನಾ ಎರಡೂ ದೇಶ ಕೋವಿಡ್ ಲಸಿಕೆ ಉತ್ಪಾದನೆ ಮಾಡ್ತಿದ್ದು, ವಿವಿಧ ದೇಶಗಳಿಗೆ ಉಡುಗೊರೆ ಹಾಗೂ ಮಾರಾಟ ಮಾಡುತ್ತಿವೆ. ಆದರೆ ಭಾರತದಲ್ಲಿ ಶೇ 60ರಷ್ಟು ಲಸಿಕೆ ಹೆಚ್ಚಾಗಿ ಉತ್ಪಾದನೆಯಾಗುತ್ತಿದೆ.
ಇದರ ಮಧ್ಯೆ ಇದೀಗ ಮತ್ತೊಂದು ಮಹತ್ವದ ಸುದ್ದಿ ವರದಿಯಾಗಿದ್ದು, ಚೀನಾದ ಹ್ಯಾಕಿಂಗ್ ಗುಂಪು ಭಾರತೀಯ ಲಸಿಕಾ ತಯಾರಿಕೆ ಕಂಪನಿಗಳ ಐಟಿ ವ್ಯವಸ್ಥೆ ಗುರಿಯಾಗಿಸಿಕೊಂಡು ಅವುಗಳ ಮೇಲೆ ದಾಳಿ ನಡೆಸಲು ಯೋಜನೆ ಹಾಕಿಕೊಂಡಿದೆ ಎಂಬ ಮಾಹಿತಿ ಇದೀಗ ಸೈಬರ್ ಗುಪ್ತಚರ ಸಂಸ್ಥೆ ಸೈಫಿರ್ಮಾ ತಿಳಿಸಿದೆ ಎನ್ನಲಾಗಿದೆ.
ಸಿಂಗಾಪುರ ಮತ್ತು ಟೋಕಿಯೋ ಮೂಲದ ಸೈಫಿರ್ಮಾ ಕಂಪನಿ ಈ ಮಾಹಿತಿ ನೀಡಿದ್ದು, ಚೀನಾದ ಹ್ಯಾಕಿಂಗ್ ಗುಂಪು ಭಾರತ್ ಬಯೋಟೆಕ್ ಹಾಗೂ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮೇಲೆ ದಾಳಿ ನಡೆಸಲು ಮುಂದಾಗಿದೆ ಎಂದಿದೆ. ಈ ಮೂಲಕ ಭಾರತೀಯ ಔಷಧೀಯ ಕಂಪನಿಗಳಿಗಿಂತಲೂ ಹೆಚ್ಚಿನ ಲಾಭ ಪಡೆದುಕೊಳ್ಳುವ ಉದ್ದೇಶ ಹೊಂದಿದೆ ಎನ್ನಲಾಗಿದೆ.