ನವದೆಹಲಿ:ಭಾರತದ ಗಡಿಯಲ್ಲಿ ಚೀನಾ ಉದ್ಧಟತನ ತೋರುತ್ತಿದೆ. ಕಳೆದ ಮೂರ್ನಾಲ್ಕು ವಾರಗಳಲ್ಲಿ ಚೀನಾದ ವಿಮಾನಗಳು ನಿಯಮಿತವಾಗಿ ವಾಸ್ತವ ನಿಯಂತ್ರಣ ರೇಖೆ (LAC) ಸಮೀಪವೇ ಚೀನಾದ ಯುದ್ಧ ವಿಮಾನಗಳು ಹತ್ತಿರ ಹಾರಾಡುತ್ತಿವೆ.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾದ ನಡುವೆ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯ ನಂತರವೂ ಚೀನಾದ ಫೈಟರ್ ಜೆಟ್‌ಗಳು ಹಾರಾಡುತ್ತಿವೆ. ಈ ಮೂಲಕ ಪೂರ್ವ ಲಡಾಖ್‌ನಲ್ಲಿ ನಿಯೋಜನೆಗೊಂಡಿರುವ ಭಾರತೀಯ ಪಡೆಗಳನ್ನು ಪ್ರಚೋದಿಸುವ ಪ್ರಯತ್ನವನ್ನು ಚೀನಾ ಮಾಡುತ್ತಿದೆ ಎಂದು ವರದಿಯಾಗಿದೆ.