ನವದೆಹಲಿ:ಪ್ಯಾಂಗಾಂಗ್ ಸರೋವರ ತೀರದಿಂದ ಚೀನಾ ಸೇನೆ ಹಿಂದೆ ಸರಿದಿದೆ. ಉಭಯ ದೇಶಗಳು LACಯಿಂದ ಸೇನೆ ಹಿಂದಕ್ಕೆ ಕರೆಯಿಸಿಕೊಳ್ಳಲು ಮಾತುಕತೆ ಮೂಲಕ ಒಪ್ಪಿಕೊಂಡಿದ್ದವು.
ಪ್ಯಾಂಗಾಂಗ್ ತ್ಸೋ ಸರೋವರದ ಪ್ರದೇಶದಲ್ಲಿ ಚೀನಾ ಸೇನೆ ಹಿಂಪಡೆಯಲಿದ್ದು, ಈ ಸಂಬಂಧ ಭಾರತ - ಚೀನಾ ಉಭಯ ದೇಶಗಳು ಉನ್ನತ ಮಟ್ಟದ ಮಿಲಿಟರಿ ಮಾತುಕತೆ ನಡೆಸಿ ಪರಸ್ಪರ ಒಪ್ಪಿಗೆ ಸೂಚಿಸಿವೆ ಎಂದು ಕಾಂಗ್ರೆಸ್ ಎಂಎಲ್ಎ ನಿನೊಂಗ್ ಎರಿಂಗ್ ತಿಳಿಸಿದ್ದಾರೆ.
ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ದಂಡೆ ವಾಸ್ತವ ಗಡಿ ರೇಖೆ(ಎಲ್‌ಎಸಿ) ಯ ಭಾರತೀಯ ಪ್ರದೇಶಕ್ಕೆ ಸೇರಿದ್ದು, ಚೀನಾ ಈ ಪ್ರದೇಶ ತನ್ನದೆಂದು ಹೇಳುತ್ತಿದೆ. ಅದರಂತೆ ಈ ಪ್ರದೇಶ ವಶಪಡಿಸಿಕೊಳ್ಳಲು ಚೀನಿ ಸೇನೆ ನಡೆಸಿದ ಪ್ರಯತ್ನ ಇದೀಗ ವಿಫಲವಾಗಿದೆ. 1959 ರಲ್ಲಿ, ದಲೈ ಲಾಮಾ ತವಾಂಗ್‌ಗೆ ಬಂದಾಗ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅರುಣಾಚಲ ಪ್ರದೇಶಕ್ಕೆ ಪ್ರವೇಶಿಸಿ ಭಾರತದ ಮೇಲೆ ಆಕ್ರಮಣ ಮಾಡಿತು. ಆದರೆ, ಕೆಲವು ಪರಿಸ್ಥಿತಿಗಳಿಂದ ಭಾರತ ಆ ಸ್ಥಳದಿಂದ ಹಿಂದೆ ಸರಿಯಬೇಕಾಯಿತು, ಆದರೆ ಚೀನಾ ಆ ಸ್ಥಳವನ್ನು ಇನ್ನೂ ಆಕ್ರಮಿಸಿಕೊಂಡಿದೆ. ತವಾಂಗ್‌ನಿಂದ ಅಂಜಾವ್‌ವರೆಗೆ ಗುಡಿಸಲುಗಳನ್ನು ನಿರ್ಮಿಸಲಾಗಿದೆ. ಹಾಗೂ ಈ ಗುಡಿಸಲುಗಳಲ್ಲಿ ವಾಸಿಸುವಂತೆ ಜನರಿಗೆ ಒತ್ತಡ ಹೇರುವುದು ಚೀನಾದ ನೀತಿಯಾಗಿದೆ. ರಸ್ತೆ ಮತ್ತು ರೈಲ್ವೆಯಂತಹ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅವರು ಭಾರತದ ಗಡಿ ಪ್ರದೇಶವನ್ನು ಬಲಪಡಿಸುತ್ತಿದ್ದಾರೆ. ಈ ಮನೆಗಳ ನಿರ್ಮಾಣ ಚೀನಾದ ಯುದ್ಧತಂತ್ರದ ನಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ನ್ಯಾಯಾಲಯ ಒತ್ತಡ ಹೇರಿದರೆ, ಚೀನಾ 1914 ರಲ್ಲಿ ಒಪ್ಪಿಕೊಂಡಿರುವ ಮ್ಯಾಕ್ಮೋಹನ್ ಗಡಿ ರೇಖೆಯನ್ನು ಅನುಸರಿಸಬೇಕಾಗುತ್ತದೆ. ಆಗ ಎಲ್ಲ ಗುಡಿಸಲುಗಳು ಮ್ಯಾಕ್ಮೋಹನ್ ರೇಖೆಯೊಳಗೆ ಬರುತ್ತವೆ.
ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಚೀನಾ ಹಿಂತಿರುಗಿದರೆ ಅದು ದೇಶಕ್ಕೆ ಒಳ್ಳೆಯ ಸುದ್ದಿ ಎಂದು ಅವರು ಹೇಳಿದ್ರು. ಚೀನಾ ನಿಷ್ಕ್ರಿಯಗೊಳಿಸುತ್ತಿದೆ ಎಂದು ಹೇಳುತ್ತಿದ್ದರೂ, ಅವರು ಈ ಮೊದಲು ಆಕ್ರಮಿಸಿಕೊಂಡ ಪ್ರದೇಶಕ್ಕೆ ಹಿಂದಿರುಗುತ್ತಿರುವ ಕಾರಣ ಚೀನಾಕ್ಕೆ ಯಾವುದೇ ನಷ್ಟವಿಲ್ಲ ಎಂದರು.
ಇದೇ ವೇಳೆ, ಕೇಂದ್ರ ಈಶಾನ್ಯ ಭಾಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಎರಿಂಗ್ ಆರೋಪಿಸಿದ್ರು. ನಮಗೆ ಸರ್ಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯವಿಲ್ಲ. ರಾಮೇಶ್ವರ ತೆಲಿ ಅವರು ಕೇವಲ ಫುಡ್ಪಾರ್ಕ್ಗಳನ್ನು ನಿರ್ಮಿಸುತ್ತಿದ್ದಾರೆ, ಮಾಡುತ್ತಿದ್ದಾರೆ, ಕಿರಣ್ ರಿಜಿಜು ಅವರು 'ಆಯುಷ್' ಅನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ಈಶಾನ್ಯ ಜನರಿಗೆ ಪ್ರಮುಖ ಖಾತೆಗಳನ್ನು ನೀಡಿ ಎಂದು ನಾನು ಪ್ರಧಾನ ಮಂತ್ರಿಗೆ ಹೇಳಲು ಇಚ್ಛಿಸುತ್ತೇನೆ ಎಂದು ಅವರು ಹೇಳಿದರು.
ಫೆಬ್ರವರಿ 11 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ 'ಪೂರ್ವ ಲಡಾಖ್‌ನ ಪರಿಸ್ಥಿತಿ' ಕುರಿತು ಲೋಕಸಭೆಗೆ ಮಾಹಿತಿ ನೀಡಿದರು ಮತ್ತು ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಎರಡೂ ಕಡೆಯವರು ತಮ್ಮ ಸೇನಾ ನಿಯೋಜನೆಯನ್ನು ಹಿಂಪಡೆಯುವಂತೆ ಭಾರತ ಮತ್ತು ಚೀನಾ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿವೆ. ತನ್ನ ಭೂಪ್ರದೇಶದ ಒಂದು ಇಂಚು ಯಾರನ್ನೂ ತೆಗೆದುಕೊಳ್ಳಲು ಅನುಮತಿಸದಿರುವ ಭಾರತದ ಸಂಕಲ್ಪವು ಪ್ಯಾಂಗಾಂಗ್ ಸರೋವರ ಪ್ರದೇಶದಿಂದ ಹೊರಗುಳಿಯುವ ಬಗ್ಗೆ ಚೀನಾದೊಂದಿಗೆ ಒಪ್ಪಂದ ಸಾಕಾರಗೊಳಿಸಲು ಕಾರಣವಾಯಿತು ಎಂದು ಹೇಳಿದ್ರು. ಚೀನಾದೊಂದಿಗಿನ ಒಪ್ಪಂದ ಭಾರತದ ರಾಜತಾಂತ್ರಿಕ ಕಾರ್ಯತಂತ್ರ ಮತ್ತು ವಿಧಾನವು ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನಗಳನ್ನು ಆಧರಿಸಿದೆ ಎಂದು ಅವರು ಹೇಳಿದ್ರು.