ಕರ್ನಾಟಕ

karnataka

ETV Bharat / bharat

ಭಾರತಕ್ಕೆ ಶಾಕಿಂಗ್​! ಮಾತುಕತೆ ಆಡುತ್ತಲ್ಲೇ 3,488 ಕಿ.ಮೀ. ಗಡಿ ಉದ್ದಕ್ಕೂ ಚೀನಾ ರೇಡಾರ್ ಹದ್ದಿನ ಕಣ್ಣು..! - ಎಲ್​ಎಸಿ ಉದ್ದಕ್ಕೂ ಚೀನಾ ರೇಡಾರ್ ನವೀಕರಣ

ಉಭಯ ದೇಶಗಳ ನಡುವೆ ಒಟ್ಟು ಎಂಟು ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಗಲಾಟೆ ನಡೆದಿದ್ದು, ಸೈನ್ಯವನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಒಂಬತ್ತನೇ ಸುತ್ತಿನ ಮಾತುಕತೆ ಶೀಘ್ರದಲ್ಲೇ ನಡೆಯಲಿದೆ. ಇದರ ಮಧ್ಯೆ, ಆಕ್ರಮಣಕಾರಿಯಾಗಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದರ ಹೊರತಾಗಿ ಚೀನಾ ಲಡಾಖ್‌ನಿಂದ ಸಿಕ್ಕಿಂ ಪ್ರದೇಶಕ್ಕೆ ರೇಡಾರ್‌ ಅಳವಡಿಸಲು ಪ್ರಾರಂಭಿಸಿದೆ.

china
ಚೀನಾ

By

Published : Nov 21, 2020, 10:05 PM IST

ನವದೆಹಲಿ: ಗಡಿ ವಿವಾದವನ್ನು ಬಗೆಹರಿಸಲು ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದರಯ, ಚೀನಾ 3,488 ಕಿ.ಮೀ. ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ವೇಗವಾಗಿ ರೇಡಾರ್‌ಗಳ ನವೀಕರಣ ಮತ್ತು ಸ್ಥಾಪನೆ ಕಾರ್ಯ ಕೈಗೆತ್ತಿಕೊಂಡಿದೆ.

ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಕ್‌ನ ಎಲ್‌ಎಸಿಯಲ್ಲಿ ಕಳೆದ ಎಂಟು ತಿಂಗಳಿಂದ ಸೈನಿಕರನ್ನು ನಿಯೋಜಿಸಲಾಗುತ್ತಿದೆ. ಈ ವಿವಾದ ಬಗೆಹರಿಸಲು ಉಭಯ ದೇಶಗಳು ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳಲ್ಲಿ ತೊಡಗಿವೆ.

ಉಭಯ ದೇಶಗಳ ನಡುವೆ ಒಟ್ಟು ಎಂಟು ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಗಲಾಟೆ ನಡೆದಿದ್ದು, ಸೈನ್ಯವನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಒಂಬತ್ತನೇ ಸುತ್ತಿನ ಮಾತುಕತೆ ಶೀಘ್ರದಲ್ಲೇ ನಡೆಯಲಿದೆ. ಇದರ ಮಧ್ಯೆ, ಆಕ್ರಮಣಕಾರಿಯಾಗಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದರ ಹೊರತಾಗಿ ಚೀನಾ ಲಡಾಖ್‌ನಿಂದ ಸಿಕ್ಕಿಂ ಪ್ರದೇಶಕ್ಕೆ ರೇಡಾರ್‌ ಅಳವಡಿಸಲು ಪ್ರಾರಂಭಿಸಿದೆ.

ಯೆಚೆಂಗ್‌ನಲ್ಲಿ ಮಧ್ಯಮ ಗಾತ್ರದ ಕಟ್ಟಡ ಮತ್ತು ಕಾವಲಿನ ಗೋಪುರ ಕಟ್ಟಡವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಥಾಪನೆಯದಾ ರೇಡಾರ್‌ಗಳ ಸಂಖ್ಯೆಯು ಮೂರರಿಂದ ನಾಲ್ಕಕ್ಕೆ ಏರಿದೆ. ಇದರಲ್ಲಿ ಒನ್​ ಜೆವೈ -9 ರೇಡಾರ್, ಒನ್​ ಜೆವೈ -26 ರೇಡಾರ್, ಒನ್​ಎಚ್‌ಜಿಆರ್ -55 ರೇಡಾರ್ ಮತ್ತು ಒಂದು ಜೆಎಲ್‌ಸಿ -88 ಬಿ ರೇಡಾರ್ ಸೇರಿವೆ. ಸಿಕ್ಕಿಂ ಮುಂಭಾಘದಲ್ಲಿ ಇರುವ ಪಾಲಿ ಮತ್ತು ಫಾರಿ ಕ್ಯರಾಂಗ್ ಲಾದಲ್ಲಿ ರೇಡಾರ್ ತಾಣವು ಕ್ಯಾರಂಗ್ ಲಾದಿಂದ ಪಶ್ಚಿಮಕ್ಕೆ ಎರಡು ಕಿ.ಮೀ. ದೂರದಲ್ಲಿದೆ. ನಾಲ್ಕು ರೇಡಾರ್‌ಗಳನ್ನು ಒಳಗೊಂಡಿದೆ.

ಕೇಂದ್ರ ಭೂತಾನ್ ಎದುರು ಇರುವ ಯಮ್​ಡ್ರೊಕ್ ತ್ಸೋದಲ್ಲಿನ ಕಣ್ಗಾವಲು ಸೌಲಭ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಮತ್ತೊಂದು ಸಾಕ್ಷಿ ಎಂದು ಉನ್ನತ ಮೂಲಗಳು ತಿಳಿಸಿವೆ.

ತ್ಸೋನಾದ ಈಶಾನ್ಯಕ್ಕೆ 6 ಕಿ.ಮೀ ದೂರದಲ್ಲಿ ಕ್ಯುನಾ ಎಲೆಕ್ಟ್ರಾನಿಕ್ ವಾರ್ಫೇರ್ ಸ್ಟೇಷನ್ ಇದೆ. ಈ ಸೈಟ್ ಮೂರು ರೇಡೋಮ್​ಗಳು, ಮೂರು ರೇಡಾರ್​ಗಳು ಮತ್ತು ಐದು ಬೆಂಬಲಿತ ಕಟ್ಟಡಗಳನ್ನು ಹೊಂದಿದೆ.

ತ್ಸೋನಾ ಡಿಜೆ ಹೆಲಿ ಬೇಸ್‌ನಿಂದ ವಾಯುವ್ಯಕ್ಕೆ 2.6 ಕಿ.ಮೀ ದೂರದಲ್ಲಿ ಇರುವ ಕಣ್ಗಾವಲು ಸೌಲಭ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಪತ್ತೆ ಹಚ್ಚಲಾಗಿದೆ. ಕೆಚೆನ್ ತ್ಶೊದಿಂದ ನೈಋತ್ಯಕ್ಕೆ 6 ಕಿ.ಮೀ. ದೂರದಲ್ಲಿ ರೇಡೋಮ್ ತಾಣವಿದೆ. ಇದು ಪರಿಧಿಯ ಗೋಡೆಯೊಳಗೆ ರೇ ಡೋಮ್, ನಿಯಂತ್ರಣ ಕಟ್ಟಡ ಮತ್ತು ಆಂಟೆನಾ ಮಾಸ್ಟ್‌ ಒಳಗೊಂಡಿದೆ.

ABOUT THE AUTHOR

...view details