ಬೀಜಿಂಗ್(ಚೀನಾ):ಬಾಹ್ಯಾಕಾಶ ಇತಿಹಾಸದಲ್ಲಿ ಚೀನಾ ಇದೀಗ ಮತ್ತೊಂದು ಸಾಧನೆ ಮಾಡಿದ್ದು, ಅಮೆರಿಕ ನಂತರ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ರೋವರ್ ಇಳಿಸಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚೀನಾ ಇದೀಗ ತನ್ನ ರೋವರ್ ಅನ್ನ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಸಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಮಂಗಳ ಗ್ರಹದ ದಕ್ಷಿಣ ಪ್ರದೇಶದಲ್ಲಿ ಜುರಾಂಗ್ ರೋವರ್ ಇಳಿಸಲಾಗಿದ್ದು, ಸೌರಶಕ್ತಿ ಚಾಲಿತ ಆರು ಗಾಲಿಗಳ ಜುರಾಂಗ್ ರೋವರ್ 240 ಕಿ.ಗ್ರಾಂ ತೂಕವಿತ್ತು. ಇದಕ್ಕೆ ಆರು ವೈಜ್ಞಾನಿಕ ಸಾಧನ ಅಳವಡಿಕೆ ಮಾಡಲಾಗಿತ್ತು. ಮಂಗಳ ಗ್ರಹದ ಮೇಲೆ ಜೀವಿಗಳ ಹುಡುಕುವ ಕೆಲಸ ಮಾಡಲಿದ್ದು, ಮೂರು ತಿಂಗಳ ಕಾರ್ಯಾಚರಣೆ ನಡೆಸಲಿದೆ.