ನವದೆಹಲಿ: ತೈವಾನ್‌ನ ಸಮುದ್ರ ಪ್ರದೇಶದಲ್ಲಿ ಚೀನಾ ದೇಶವು ಮಿಲಿಟರಿ ತಾಲೀಮು ಪ್ರಾರಂಭಿಸಿದೆ. ಚೀನಾದ 13 ವಿಮಾನಗಳು ಮತ್ತು ಮೂರು ಯುದ್ಧನೌಕೆಗಳನ್ನು ತೈವಾನ್ ದ್ವೀಪದ ಸುತ್ತಮುತ್ತ ಪತ್ತೆ ಮಾಡಲಾಗಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿ ತಿಳಿಸಿದೆ. ಮಾಹಿತಿ ಪ್ರಕಾರ, ಹದಿಮೂರು ಪಿಎಲ್‌ಎ ವಿಮಾನಗಳು ಮತ್ತು 3 ಪೀಪಲ್ಸ್ ಲಿಬರೇಷನ್ ಆರ್ಮಿ ನೇವಿ (PLAN) ಹಡಗುಗಳು ಇಂದು ಬೆಳಗ್ಗೆ 6 ಗಂಟೆಗೆ ಪತ್ತೆಯಾಗಿವೆ.
ಸದ್ಯದ ಪರಿಸ್ಥಿತಿಯ ಕುರಿತು ಮೇಲ್ವಿಚಾರಣೆ ನಡೆಸಲು ಮತ್ತು ಅವರ ಚಟುವಟಿಕೆಗಳನ್ನ ತಿಳಿದುಕೊಳ್ಳಲು ನಮ್ಮ ಸಶಸ್ತ್ರ ಪಡೆ ಸನ್ನದ್ಧವಾಗಿದೆ. ಯದ್ಧ ಏರ್ ಪೆಟ್ರೋಲ್ ( CAP ) ವಿಮಾನಗಳು, ನೌಕಾಪಡೆಯ ಹಡಗುಗಳು ಮತ್ತು ಭೂ ಆಧಾರಿತ ಕ್ಷಿಪಣಿಗಳನ್ನು ನಿಯೋಜಿಸಲಾಗಿದೆ. ಪತ್ತೆಯಾದ ನಾಲ್ಕು ವಿಮಾನಗಳು a - SU - 30, Y - 8 RECCE ಮತ್ತು ಎರಡು J - 16 ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನ ದಾಟಿಕೊಂಡು ತೈವಾನ್‌ನ ನೈಋತ್ಯ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿವೆ ಎಂದು ತೈವಾನ್ ರಕ್ಷಣಾ ಇಲಾಖೆ ತಿಳಿಸಿದೆ.
ಇದನ್ನೂ ಓದಿ :ತೈವಾನ್ ಮೇಲೆ ಆಕ್ರಮಣ ಮಾಡುವ ಸಾಮರ್ಥ್ಯದ ಬಗ್ಗೆ ಚೀನಾಕ್ಕೆ ಅನುಮಾನವಿದೆ : ಸಿಐಎ ಮುಖ್ಯಸ್ಥ
ತೈವಾನ್ ಅಧ್ಯಕ್ಷ ಸಾಯ್ ಇಂಗ್ ವೆನ್ ಅವರು ಯುನೈಟೆಡ್ ಸ್ಟೇಟ್ಸ್ ಪ್ರವಾಸದಿಂದ ಹಿಂದಿರುಗಿದ ಒಂದು ದಿನದ ನಂತರ ತೈವಾನ್ ಸುತ್ತ ಚೀನಾ ಮಿಲಿಟರಿ ತಾಲೀಮು ಪ್ರಾರಂಭಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿಯ ಈಸ್ಟರ್ನ್ ಥೀಯೇಟರ್ ಕಮಾಂಡ್ ಯುನೈಟೆಡ್ ಶಾರ್ಪ್ ಸ್ವೀರ್ಡ್ ಏಪ್ರಿಲ್ 8 ರಿಂದ 10 ರವರೆಗೆ ಸೇನಾ ಕಾರ್ಯಾಚರಣೆ ನಡೆಸುವುದಾಗಿ ಹೇಳಿತ್ತು.