ಕರ್ನಾಟಕ

karnataka

ETV Bharat / bharat

'ಗಡಿ'ಬಿಡಿ ಮಧ್ಯೆಯೇ ಪೂರ್ವ ಲಡಾಖ್​ ಸಮೀಪ ಮೊಬೈಲ್​ ಟವರ್​ ನಿರ್ಮಿಸಿದ ಚೀನಾ - Chinas illegal construction

ತನ್ನ ಸೇನೆಗೆ ಅನುಕೂಲವಾಗುವಂತೆ ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯನ್ನು ಸಂಪರ್ಕಿಸುವ ಸೇತುವೆಯನ್ನು ಚೀನಾ ಕಟ್ಟಿದೆ. ಜೊತೆಗೆ ಸುಮಾರು ಎರಡು ವರ್ಷಗಳಿಂದಲೂ ಗಡಿಯಲ್ಲಿ ಭಾರತ ಮತ್ತು ಚೀನಾ ಸೇನೆಗಳು ನಿರಂತರವಾಗಿ ನಿಯೋಜನೆಗೊಂಡಿವೆ. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ಇದೆ.

ಮೊಬೈಲ್​ ಟವರ್​ ನಿರ್ಮಿಸಿದ ಚೀನಾ
ಮೊಬೈಲ್​ ಟವರ್​ ನಿರ್ಮಿಸಿದ ಚೀನಾ

By

Published : Apr 17, 2022, 6:24 PM IST

Updated : Apr 17, 2022, 7:49 PM IST

ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಪೂರ್ವ ಲಡಾಖ್​​ನ ಹಾಟ್​​ ಸ್ಪ್ರಿಂಗ್​ ಪ್ರದೇಶದಲ್ಲಿ ಚೀನಾ ಮೂರು ಮೊಬೈಲ್​ ಟವರ್​ಗಳನ್ನು ಸ್ಥಾಪಿಸಿದೆ. ಇದನ್ನು ಚಿತ್ರಸಮೇತವಾಗಿ ಲಡಾಖ್​ನ ಚುಶುಲ್​​ನ ಕೌನ್ಸಿಲರ್ ಕೊಂಚೋಕ್ ಸ್ಟಾಂಜಿನ್ ಬಹಿರಂಗಪಡಿಸಿದ್ದಾರೆ.

'ಪ್ಯಾಂಗಾಂಗ್ ಸರೋವರದ ಮೇಲೆ ಸೇತುವೆ ಪೂರ್ಣಗೊಳಿಸಿದ ನಂತರ ಚೀನಾವು ಭಾರತದ ಭೂಪ್ರದೇಶಕ್ಕೆ ಸಮೀಪವಿರುವ ಹಾಟ್​​ ಸ್ಪ್ರಿಂಗ್​ ಪ್ರದೇಶದ ಬಳಿ 3 ಮೊಬೈಲ್ ಟವರ್‌ಗಳನ್ನು ನಿರ್ಮಿಸಿದೆ. ಇದು ಆತಂಕಕಾರಿಯಲ್ಲವೇ?. ನಮ್ಮಲ್ಲಿ ಜನವಸತಿ ಗ್ರಾಮಗಳಲ್ಲೇ 4ಜಿ ಸೌಲಭ್ಯವಿಲ್ಲ. ನನ್ನ ಕ್ಷೇತ್ರದ ವ್ಯಾಪ್ತಿಯ 11 ಹಳ್ಳಿಗಳಲ್ಲೂ 4ಜಿ ಸೌಲಭ್ಯವಿಲ್ಲ' ಎಂದು ಟ್ವೀಟ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ಯಾಂಗಾಂಗ್ ಸರೋವರದ ಮೇಲೆ ಚೀನಾ ಅಕ್ರಮವಾಗಿ ಸೇತುವೆ ಕಟ್ಟುವುದಕ್ಕೆ ಕಳೆದ ಜನವರಿಯಲ್ಲಿ ಭಾರತ ಬಲವಾಗಿ ವಿರೋಧಿಸಿತ್ತು. 60 ವರ್ಷಗಳ ಹಿಂದೆ ಅಕ್ರಮವಾಗಿ ವಶಪಡಿಸಿಕೊಂಡ ಭೂಪ್ರದೇಶದಲ್ಲಿ ಸೇತುವೆ ಕಟ್ಟುವುದನ್ನು ಭಾರತ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದನ್ನು ನಿಮಗೆ (ಚೀನಾ) ತಿಳಿದಿರುವಂತೆ ಭಾರತ ಎಂದಿಗೂ ಸಹಿಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು.

ತನ್ನ ಸೇನೆಗೆ ಅನುಕೂಲವಾಗುವಂತೆ ಪ್ಯಾಂಗಾಂಗ್ ಉತ್ತರ ಮತ್ತು ದಕ್ಷಿಣ ದಂಡೆಗೆ ಸಂಪರ್ಕಿಸುವಂತೆ ಸೇತುವೆಯನ್ನು ಚೀನಾ ಕಟ್ಟಿದೆ. ಜೊತೆಗೆ ಸುಮಾರು ಎರಡು ವರ್ಷಗಳಿಂದಲೂ ಗಡಿಯಲ್ಲಿ ಭಾರತ ಮತ್ತು ಚೀನಾ ಸೇನೆಗಳು ನಿರಂತರವಾಗಿ ನಿಯೋಜನೆಗೊಂಡಿದ್ದು, ಉದ್ವಿಗ್ನ ಪರಿಸ್ಥಿತಿ ಇದೆ.

ಇದನ್ನೂ ಓದಿ:'ಭಾರತಕ್ಕೆ ಹಾನಿಯಾದರೆ ಯಾರನ್ನೂ ಬಿಡೆವು': ಅಮೆರಿಕದಲ್ಲಿ ನಿಂತು ರಾಜನಾಥ್‌ ಸಿಂಗ್ ಎಚ್ಚರಿಕೆ

Last Updated : Apr 17, 2022, 7:49 PM IST

ABOUT THE AUTHOR

...view details