ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಭಾರತದ ಹೋರಾಟದಲ್ಲಿ ಚೀನಾ ಸರ್ಕಾರ ಮತ್ತು ಚೀನಿಯರು ಸದೃಢವಾಗಿ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಚೀನಾದ ರಾಯಭಾರ ಕಚೇರಿಯ ವಕ್ತಾರ ವಾಂಗ್ ಕ್ಸಿಯೋಜಿಯಾನ್ ಅಭಯ ನೀಡಿದರು.
ವೈದ್ಯಕೀಯ ಸಾಮಗ್ರಿಗಳು ಪಡೆಯಲು ಅನುಕೂಲವಾಗುವಂತೆ ಚೀನಾದ ಕಂಪನಿಗಳು ಭಾರತದೊಂದಿಗೆ ಸಕ್ರಿಯವಾಗಿ ಸಹಕರಿಸಲು ನಾವು ಪ್ರೋತ್ಸಾಹಿಸುತ್ತೇವೆ. ಈ ಬಗ್ಗೆ ಮಾರ್ಗದರ್ಶನ ಸಹ ನೀಡುತ್ತೇವೆ. ಭಾರತದ ಅಗತ್ಯಕ್ಕೆ ಅನುಗುಣವಾಗಿ ಬೆಂಬಲ ಮತ್ತು ಸಹಕಾರ ನೀಡುತ್ತೇವೆ ಎಂದು ವಾಂಗ್ ಅವರು ಭಾರತದ ಕೋವಿಡ್ -19 ಪರಿಸ್ಥಿತಿಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.
ಕೋವಿಡ್ -19 ಸಾಂಕ್ರಾಮಿಕವು ಮಾನವಕುಲದ ಶತ್ರು. ಅದು ಅಂತಾರಾಷ್ಟ್ರೀಯ ಒಗ್ಗಟ್ಟು ಮತ್ತು ಪರಸ್ಪರ ಸಹಾಯದ ಅಗತ್ಯವಿದೆ. ಭಾರತದಲ್ಲಿ ಇತ್ತೀಚಿನ ತೀವ್ರ ಸಾಂಕ್ರಾಮಿಕ ಪರಿಸ್ಥಿತಿಗೆ ಚೀನಾ ಪ್ರಾಮಾಣಿಕ ಸಹಾನುಭೂತಿ ವ್ಯಕ್ತಪಡಿಸುತ್ತದೆ ಎಂದರು.