ನವದೆಹಲಿ :ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ (ಸಿಎಎಸ್) ವಿಶ್ವದ ಅತಿ ಎತ್ತರದ ಶಿಖರದ ಉತ್ತರದಲ್ಲಿರುವ ಟಿಬೆಟಿಯನ್ ಪ್ರದೇಶದಲ್ಲಿ ಸಂಶೋಧನೆ ನಡೆಸಿದ್ದು, 59 ಬಂಡೆಗಳ ಮಾದರಿಯನ್ನು ಸಂಗ್ರಹಿಸಿದೆ. ಇದರಲ್ಲಿ 44 ಬಂಡೆಗಳಲ್ಲಿ ಲಿಥಿಯಂ ಅಂಶ ಹೆಚ್ಚಾಗಿರುವುದು ಕಂಡು ಬಂದಿದೆ.
ಲ್ಯಾಪ್‌ಟಾಪ್, ಸೆಲ್ ಫೋನ್‌ಗಳ ಬ್ಯಾಟರಿ, ಗಾಜು, ಪಿಂಗಾಣಿ ಉದ್ಯಮದಲ್ಲಿ ಮತ್ತು ಎಲೆಕ್ಟ್ರಿಕ್ ವಾಹನಗಳ (ಇವಿ) ಬ್ಯಾಟರಿಗಳನ್ನು ತಯಾರಿಸಲು ಲಿಥಿಯಂ ಅನಿವಾರ್ಯವಾಗಿದೆ. ಹಿಮಾಲಯವು ಇಂತಹ ಅಪರೂಪದ ಖಜಿಜ ಸಂಪತ್ತಿನ ಪ್ರಮುಖ ಶೇಖರಣಾ ತಾಣವಾಗಿದೆ ಎಂದು ಅಧ್ಯಯನವು ಸೂಚಿಸಿದೆ.
ಹೊಸ ಜಾಗತಿಕ ಇಂಧನ ಉದ್ಯಮಕ್ಕೆ ಸಂಪನ್ಮೂಲವನ್ನು ಬಳಸಿಕೊಳ್ಳುವ ಪ್ರಯತ್ನದಲ್ಲಿ, ಈ ಆವಿಷ್ಕಾರವು ಚೀನೀಯರ ಆಸಕ್ತಿಯನ್ನು ಹೆಚ್ಚಿಸಿದೆ. ಇತ್ತೀಚೆಗೆ ಸಿಎಎಸ್ನ ಅಧ್ಯಯನವು, ಮೌಂಟ್ ಎವರೆಸ್ಟ್ ಪ್ರದೇಶದಲ್ಲಿ ಗಮನಾರ್ಹವಾದ ಹವಾಮಾನ ಬದಲಾವಣೆಯಾಗಿರುವುದನ್ನು ಕಂಡು ಹಿಡಿದಿದೆ. 1961 ರಿಂದ 2018ರವರೆಗಿನ ಹವಾಮಾನ ಅವಲೋಕನಗಳ ಆಧಾರದ ಮೇಲೆ ಈ ಪ್ರದೇಶದಲ್ಲಿ ಪ್ರಸ್ತುತ ಹಿಮನದಿ ಪ್ರದೇಶಗಳು 3,266ಕ್ಕೆ ಕುಗ್ಗಿವೆ ಎನ್ನಲಾಗ್ತಿದೆ.